ಹೊಸನಗರ ಪಟ್ಟಣದ ನೀರಿನ ಬಿಲ್ ಕಡಿತಗೊಳಿಸಿ ; ಎಂ.ಎನ್. ಸುಧಾಕರ್

0 177

ಹೊಸನಗರ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿಗೆ ಸುಮಾರು 500 ಕ್ಕಿಂತಲೂ ಹೆಚ್ಚು ಮನೆಗಳಿವೆ ಸರಿಯಾಗಿ ನಲ್ಲಿ ನೀರು ಬಿಡುತ್ತಿಲ್ಲದ ಕಾರಣ ಪ್ರತಿ ತಿಂಗಳು ನಲ್ಲಿ ನೀರಿನ ಮಾಸಿಕ ಬಾಡಿಕೆ ಕಡಿಮೆ ಮಾಡಬೇಕೆಂದು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಎನ್.ಸುಧಾಕರ್ ಪಟ್ಟಣ ಪಂಚಾಯತಿಯನ್ನು ಆಗ್ರಹಿಸಿದ್ದಾರೆ.

ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಹೊಸನಗರ ಪಟ್ಟಣ ಪಂಚಾಯತಿಯವರು ಜಾಕ್‌ವೆಲ್ ಮೂಲಕ ಮನೆ-ಮನೆಗಳಿಗೆ ನಲ್ಲಿ ನೀರು ಬಡುತ್ತಿರುವುದು ಸರಿಯಷ್ಟೆ ಕೆಲವು ನಲ್ಲಿಗಳಿಗೆ ಮೀಟರ್ ಆಳವಾಡಿಸಲಾಗಿದೆ ಆದರೆ ಇಲ್ಲಿಯವರೆಗೆ ಮೀಟರ್ ದರದಲ್ಲಿ ಹಣ ಪಡೆಯುತ್ತಿಲ್ಲ ನಾಮಕಾವಸ್ಥೆಗಾಗಿ ಮೀಟರ್ ಅಳವಡಿಸಲಾಗಿದೆ. ಪಟ್ಟಣ ಪಂಚಾಯತಿಯ ಆಡಳಿತ ವರ್ಗ ಆರು ತಿಂಗಳ ಹಿಂದೆ ಪ್ರತಿದಿನ ಬೆಳಿಗ್ಗೆ ನಲ್ಲಿ ನೀರು ಬಿಡುತ್ತಿದ್ದರು ನಾವು 150 ರೂಪಾಯಿ ನಲ್ಲಿಯ ಬಿಲ್ ಕಟ್ಟುವುದು ಸರಿಯಿತ್ತು ಆದರೆ ಜಾಕ್‌ವೆಲ್‌ನಲ್ಲಿ ನೀರಿನ ಕೊರತೆಯಿದೆ. ಪೈಪ್‌ಲೈನ್ ಸರಿಯಿಲ್ಲ ಎಂಬ ಕಾರಣದಿಂದ ಕಳೆದ 6 ತಿಂಗಳಿನಿಂದ ಎರಡು ದಿನಕ್ಕೊಮ್ಮೆ ಮನೆ-ಮನೆಗಳಿಗೆ ನಲ್ಲಿಯಲ್ಲಿ ನೀರು ಬೀಡುತ್ತಿದ್ದಾರೆ ಮುಂದಿನ ದಿನದಲ್ಲಿ ಬರಗಾಲ ಆಗಮಿಸಿದೆ ಹೊಳೆಯಲ್ಲಿ ನೀರಿಲ್ಲ ಎಂಬ ಕಾರಣದೊಂದಿಗೆ ಮೂರು ದಿನಕ್ಕೆ ನಾಲ್ಕು ದಿನಕ್ಕೆ ಒಮ್ಮೆ ನೀರು ಬಿಟ್ಟರೂ ಅಶ್ಚರ್ಯಪಡಬೇಕಾಗಿಲ್ಲ ಆದರೆ ನಲ್ಲಿಗಳಿಗೆ ಮೀಟರ್ ಆಳವಡಿಸಿ ಬಿಲ್ ಕಟ್ಟಿಸಿಕೊಂಡರೆ ನಮ್ಮದೇನು ಅಡ್ಡಿಯಿಲ್ಲ ಆದರೆ ಪಟ್ಟಣ ಪಂಚಾಯತಿಯವರು ನಾಲ್ಕೈದು ದಿನಕ್ಕೂಮ್ಮೆ ನೀರು ಬಿಟ್ಟು ಮಾಸಿಕ 150 ರೂಪಾಯಿ ಪಡೆದರೇ ನಮ್ಮ ತಾಕರಾರು ಇದೆ. ಮುಂದಿನ ದಿನದಲ್ಲಿ ಹೊಸನಗರ ಪಟ್ಟಣದ ನಲ್ಲಿ ಇರುವ ಮಾಲೀಕರೊಂದಿಗೆ ಹೋರಾಟ ಅನಿವಾರ್ಯವಾಗುತ್ತದೆ. ಪಟ್ಟಣ ಪಂಚಾಯತಿ ಸದಸ್ಯರು ಆಡಳಿತ ವರ್ಗದವರು ತಕ್ಷಣ ಎಚ್ಚೆತ್ತುಕೊಂಡು ಪ್ರತಿದಿನ ನಲ್ಲಿ ನೀರು ಬಿಡಿ ಇಲ್ಲವಾದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮಾಸಿಕ ಬಾಡಿಗೆ ಕಡಿಮೆ ಮಾಡಲಿ ಎಂದು ಪಟ್ಟಣ ಪಂಚಾಯತಿ ಆಡಳಿತ ವರ್ಗಕ್ಕೆ ಹಾಗೂ ಅಧಿಕಾರಿಗಳಿಗೆ ಆಗ್ರಹಿಸಿದರು.

ಬೀದಿನಾಯಿ ಮತ್ತು ಮಂಗಗಳ ಕಾಟ:
ಹೊಸನಗರ ಪಟ್ಟಣದಲ್ಲಿ ಬೆಳಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಬೀದಿನಾಯಿಗಳ ಕಾಟದಿಂದ ಓಡಾಟ ನಡೆಸುವುದೇ ಕಷ್ಟಕರವಾಗಿದೆ. ಪ್ರತಿಯೊಬ್ಬರು ದೊಣ್ಣೆ ಹಿಡಿದುಕೊಂಡು ಓಡಾಟ ನಡೆಸುವ ಪ್ರಮೇಯ ಬಂದಿದೆ. ಪಟ್ಟಣ ಪಂಚಾಯತಿಯವರು ಪ್ರತಿ ಮಾಸಿಕ ಸಭೆಯಲ್ಲಿಯೂ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಿ ನಾಯಿಗಳ ಸಂತತಿ ಕಡಿಮೆ ಮಾಡುತ್ತೇವೆ ಎಂದು ಹೇಳುವುದರಲ್ಲಿಯೇ ಕಾಲ ಕಳೆಯುತ್ತಿದ್ದು ನಾಯಿಗಳ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿ ಮಂಗಗಳ ಸಂಖ್ಯೆಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಾಯಿ ಮತ್ತು ಮಂಗಗಳಿಗೆ ಪಟ್ಟಣದಿಂದ ಮುಕ್ತಿಗೊಳಿಸದಿದ್ದರೇ ಮುಂದಿನ ವಿಧಾನಸಭೆ ಹಾಗೂ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಅವುಗಳೇ ಚುನಾವಣೆಗೆ ನಿಂತು ಜಯಶಾಲಿಯಾಗುವುದರಲ್ಲಿ ಯಾವುದೇ ಅನುಮಾನ ಬೇಡ. ಪಟ್ಟಣ ಪಂಚಾಯತಿ ತಕ್ಷಣ ಸ್ವಂದಿಸಿ ನಾಯಿ ಮಂಗಗಳಿಗೆ ಮುಕ್ತಿಗೊಳಿಸಲಿ ಎಂದರು.

ಅಧ್ಯಕ್ಷರ ಚುನಾವಣೆ ನಡೆಯದೇ 6 ತಿಂಗಳಾಯಿತು:
ಪಟ್ಟಣ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಡೆಯದೇ 6 ತಿಂಗಳು ಕಳೆದಿದೆ 6 ತಿಂಗಳಿಂದ ತಹಶೀಲ್ದಾರ್‌ರವರು ಆಡಳಿತಾಧಿಕಾರಿ ಕೆಲಸ ಮಾಡುತ್ತಿದ್ದಾರೆ. ತಕ್ಷಣ ಅಧ್ಯಕ್ಷರ ಮೀಸಲಾತಿ ಜಾರಿಗೆ ತನ್ನಿ ಅಧ್ಯಕ್ಷರನ್ನು ಆಯ್ಕೆ ಮಾಡಿದರೆ ಹೊಸನಗರದ ಪಟ್ಟಣ ಪಂಚಾಯತಿಯ ಕೆಲವು ತುರ್ತು ಸಮಸ್ಯೆಯನ್ನಾದರೂ ಬಗೆ ಹರಿಸಬಹುದು ಎಂದರು.

Leave A Reply

Your email address will not be published.

error: Content is protected !!