ಅಗ್ನಿ ಅವಘಡ, 4 ಕಾರುಗಳು ಸುಟ್ಟು ಭಸ್ಮ !

0 412

ಚಿಕ್ಕಮಗಳೂರು: ಆಕಸ್ಮಿಕವಾಗಿ ಹುಲ್ಲಿಗೆ ಹತ್ತಿದ ಬೆಂಕಿ ಅಕ್ಕಪಕ್ಕೆಲ್ಲ ಆವರಿಸಿ ನಾಲ್ಕು ಕಾರುಗಳು ಸುಟ್ಟು ಭಸ್ಮವಾದ ಘಟನೆ ನಗರದ ಉಪ್ಪಳ್ಳಿಯ ಬದ್ರಿಯಾ ಗ್ಯಾರೇಜ್ ನಲ್ಲಿ ಭಾನುವಾರ ನಡೆದಿದ್ದು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಮಲೆನಾಡಲ್ಲೂ ರಣಬಿಸಿಲು ಭೂಮಿಯನ್ನು ಕಾದ ಕಾವಲಿಯಂತೆ ಮಾಡಿದ್ದು ಬಿಸಿಲಿನ ಝಳಕ್ಕೆ ಸಣ್ಣ ಹುಲ್ಲಿನ ಕಡ್ಡಿಯೂ ಬೆಂಕಿ ಉರಿಯಾಗಿ ನಾಲ್ಕು ಕಾರುಗಳಿಗೆ ಅಗ್ನಿ ಸ್ಪರ್ಷವಾಗಿದೆ. ಒಂದೇ ಕಡೆ ನಿಲ್ಲಿಸಿದ್ದ ನಾಲ್ಕು ಕಾರುಗಳು ಬೆಂಕಿಗೆ ಆಹುತಿಯಾಗಿವೆ.

ನಗರದ ಉಪ್ಪಳ್ಳಿ ಸಮೀಪದ ಬದ್ರಿಯ ಗ್ಯಾರೇಜ್ ನಲ್ಲಿ ರಿಪೇರಿಗೆ ಬಿಟ್ಟಿದ್ದ ನಾಲ್ಕು ಕಾರುಗಳು ಏಕಾಏಕಿ ತಗುಲಿದ ಬೆಂಕಿಯಿಂದ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಆವರಿಸುವ ಮೊದಲೇ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ. ಇಷ್ಟೇ ಅಲ್ಲದೇ ಪಕ್ಕದಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿನ ಟಯರ್ ಗೆ ಸಹಾ ಬೆಂಕಿ ತಗುಲಿದೆ. ಬೇಸಿಗೆಯ ದಿನಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು ಸಣ್ಣಪುಟ್ಟ ಕಿಡಿಗಳು ಸಹಾ ದೊಡ್ಡ ಅನಾಹುತ ಸೃಷ್ಟಿಸಲು ಅವಕಾಶ ಮಾಡಿಕೊಡುವಂತಾಗಿದೆ.

Leave A Reply

Your email address will not be published.

error: Content is protected !!