ವಿರೋಧ ಮಾಡುವುದೇ ಬಿಜೆಪಿಯವರ ಕೆಲಸ ; ಕೆ.ಜೆ.ಜಾರ್ಜ್

0 35

ಚಿಕ್ಕಮಗಳೂರು : ಬಿಜೆಪಿಯವರ ಕೆಲಸವೇ ವಿರೋಧ ಮಾಡುವುದು. ಕಾಂಗ್ರೆಸ್ಸಿನ ಅಭಿವೃದ್ಧಿ ಹೆಜ್ಜೆಗೆ ವಿರೋಧವೇ ಅವರ ಕೆಲಸ. ಅವರು ಪ್ರತಿಪಕ್ಷ‌ ಅಲ್ಲ, ವಿರೋಧ ಪಕ್ಷ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು. ಬಲವಂತ, ಆಶ್ವಾಸನೆ ಕೊಟ್ಟು ಮತಾಂತರ ಮಾಡುವುದು ತಪ್ಪು, ಹಳೆಯ ಕಾಯ್ದೆಯೇ ಇದೆ. ಆರೋಪ ಮಾಡಿದವರು ಪ್ರೂವ್ ಮಾಡಬೇಕು. ಆರೋಪ ಮಾಡುವವರು ಸಾಕ್ಷಿ ಕೊಟ್ಟು ಹೇಳಬೇಕು. ನನ್ನ ಮೇಲೆ ಆರೋಪ‌ ಮಾಡಿದರೆ ನಾನೇ ಪ್ರೂವ್ ಮಾಡಬೇಕೆ? ಇದು ಯಾವ ಕಾನೂನಿನಲ್ಲಿ ಇದೆ. ಈ ರೀತಿ ತುಂಬಾ ತಪ್ಪು ಮಾಡಿದ್ದಾರೆ, ನಾವು ಸರಿ ಮಾಡುತ್ತೇವೆ ಎಂದರು.

ಇಷ್ಟು ದಿನ ಇದ್ದರಲ್ಲ, ಹೊಸದಾಗಿ ಏನು ಕಂಡು ಹಿಡಿದಿದ್ದಾರೆ. ನಮ್ಮ ಜವಾಬ್ದಾರಿ ಇದೆ, ಎಲ್ಲರಿಗೂ ಸರಿ ಆಗುವ ಕಾಯ್ದೆ ಜಾರಿಗೆ ಮಾಡುತ್ತೇವೆ ಎಂದರು.

Leave A Reply

Your email address will not be published.

error: Content is protected !!