ಚಿಕ್ಕಮಗಳೂರು: ಎರಡೂವರೆ ವರ್ಷದ ಸುಮಾರು 600 ಅಡಿಕೆ ಗಿಡಗಳನ್ನು ಕಡಿದು ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಘಟನೆ ತಾಲ್ಲೂಕಿನ ಕಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಭಾನುವಾರ ರೇವಣ್ಣ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 600 ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ. ಸೋಮವಾರ ರೇವಣ್ಣ ತೋಟಕ್ಕೆ ಬಂದು ನೋಡಿದಾಗ ಅಡಿಕೆ ಗಿಡ ಕಡಿದು ಹಾಕಿರುವುದನ್ನು ಕಂಡು ಶಾಕ್ ಆಗಿದ್ದಾರೆ.
ಕಲ್ಲಾಪುರ ಗ್ರಾಮದಲ್ಲಿ ಎಲ್ಲರೂ ಸೌಹಾರ್ದಯುತವಾಗಿದ್ದೇವೆ. ಒಬ್ಬರ ಮೇಲೆ ಮಾತ್ರ ನನಗೆ ಅನುಮಾನವಿದ್ದು, ಅವರ ಮೇಲೆ ದೂರು ನೀಡುತ್ತೇವೆ ಎಂದು ರೇವಣ್ಣ ಅವರ ಮಗ ಮಂಜುನಾಥ್ ತಿಳಿಸಿದ್ದಾರೆ.
ಕಡೂರು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಗ್ರಾಮದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.