ಮೂಡಿಗೆರೆ: ಸಹೋದ್ಯೋಗಿಗಳ ವಿರುದ್ಧ ಪಿತೂರಿ ಆರೋಪದಲ್ಲಿ ಕಾನ್ಸ್‌ಟೇಬಲ್ ಮಂಜುನಾಥ್ ರನ್ನು ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಅಮಾನತು ಮಾಡಿದ್ದಾರೆ.
ಕಳ್ಳತನದ ಆರೋಪದ ಹಿನ್ನೆಲೆ ಆಟೋ ಚಾಲಕನೊಬ್ಬನ ಮೇಲೆ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಹಿತ್ ಹಾಗೂ ವಸಂತ್ ಎಂಬುವವರು ಹಲ್ಲೆ ಮಾಡಿದ್ದರು. ಈ ಕುರಿತು ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಇಬ್ಬರು ಪೇದೆಗಳನ್ನ ಅಮಾನತು ಮಾಡಿದ್ದರು.
ಇದೀಗ ಅಮಾನತು ಆಗಿದ್ದ ಇಬ್ಬರು ಕಾನ್ಸ್‌ಟೇಬಲ್ ವಿರುದ್ಧ ದೂರು ನೀಡಿ, ಹಣ ಪಡೆಯುವಂತೆ ಸಾರ್ವಜನಿಕರ ಮೇಲೆ ಒತ್ತಡ ಹಾಕಿದ್ದ ಕಾನ್ಸ್‌ಟೇಬಲ್ ಮಂಜುನಾಥ್ ರನ್ನು ಅಮಾನತು ಮಾಡಲಾಗಿದೆ.