ಮಾವಿನಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಜಿ ಪ್ರವೀಣ್‌ಕುಮಾರ್ ಆಯ್ಕೆ

0 328

ಹೊಸನಗರ: ತಾಲ್ಲೂಕಿನ ಮಾವಿನಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಿರ್ದೆಶಕರ ಚುನಾವಣೆ ಮಾರ್ಚ್ 10ರಂದು ನಡೆದಿದ್ದು ಅಧ್ಯಕ್ಷರಾಗಿ ಹೆಚ್.ಜಿ ಪ್ರವೀಣ್‌ಕುಮಾರ್ ಮಳವಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮಾವಿನಕೊಪ್ಪ ಈಶ್ವರ, ನಿರ್ದೇಶಕರುಗಳಾಗಿ ಸುರೇಂದ್ರ, ಶ್ರೀಧರ ಡಿ.ಎಸ್, ಸುಬ್ರಹ್ಮಣ್ಯ, ಅಣ್ಣಪ್ಪ, ಸುಶೀಲ ಹಾಗೂ ಸುಮಿತ್ರ ಆರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಶಿಕ್ಷಕ ಚಂದ್ರಶೇಖರ್‌ ಕಾರ್ಯನಿರ್ವಹಿಸಿದ್ದು ಕಾರ್ಯದರ್ಶಿ ಪ್ರಭುಗೌಡರವರು ಉಪಸ್ಥಿತರಿದ್ದರು.

ಅಭಿನಂದನೆ:
ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರವೀಣ್ ಕುಮಾರ್‌ರವರನ್ನು ನ್ಯಾಯವಾದಿ ಗುರುಕಿರಣ್‌ರವರು ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!