Ripponpete

ಸಮಟಗಾರು ಒತ್ತುವರಿ ತೆರವುಗೊಳಿಸಿ ಗ್ರಾಮಾಭಿವೃದ್ದಿಗೆ ಮೀಸಲಿಡಿ ; ಗ್ರಾಮಸ್ಥರ ಆಗ್ರಹ

ರಿಪ್ಪನ್‌ಪೇಟೆ : ಹುಂಚ ಹೋಬಳಿ ಹೊನ್ನೆಬೈಲು ಗ್ರಾಮದ ಸ.ನಂ 99 ರಲ್ಲಿನ ಗೋಮಾಳ ಪ್ರದೇಶವನ್ನು ಅಕ್ರಮವಾಗಿ ಸಾಗುವಳಿ ಮಾಡಿಕೊಳ್ಳುವ ಮೂಲಕ ಕಬಳಿಸುವ ಹುನ್ನಾರದಲ್ಲಿ ಲಕ್ಷಾಂತರ ರೂ. ಮೌಲ್ಯದ ಕಾಡು ಜಾತಿಯ ಮರಗಳು ಸೇರಿದಂತೆ ಬೆಲೆಬಾಳುವ ಬೀಟೆ, ಹೊನ್ನೆ, ಸಾಗುವಾನಿ, ಭರಣಿಗೆ, ಹೊನಾಲು ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಪಶ್ಚಿಮಘಟ್ಟದ ಅರಣ್ಯ ಪ್ರದೇಶವನ್ನು ಬಯಲುಸೀಮೆಯ ಪ್ರದೇಶವನ್ನಾಗಿಸಿದ್ದಾರೆಂದು ಆರೋಪಿಸಿ ಸಮಟಗಾರು ಗ್ರಾಮಸ್ಥರು ಕಳೆದ 13 ದಿನಗಳಿಂದ ಹುಂಚ ನಾಡಕಛೇರಿಯ ಮುಂದೆ ಪ್ರತಿಭಟನೆ ನಡೆಸುವುದರೊಂದಿಗೆ ಕಬಳಿಸಿರುವ ಭೂಮಿಯನ್ನು ಗ್ರಾಮಾಭಿವೃದ್ದಿಗೆ ಮೀಸಲಿರಿಸುವಂತೆ ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈಗಾಗಲೇ ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಹೊಸನಗರ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಹುಂಚ ಹೋಬಳಿಯ ಹೊನ್ನೆಬೈಲು ಗ್ರಾಮದ ಸಮಟಗಾರು ಮಜರೆ ಗ್ರಾಮದಲ್ಲಿ ಉಂಟಾಗಿದ್ದ ಓಡಾಡುವ ರಸ್ತೆ ವಿವಾದದಿಂದಾಗಿ ಒತ್ತುವರಿದಾರ ರಸ್ತೆ ಬಿಡುವಲ್ಲಿ ಗ್ರಾಮಸ್ಥರಿಗೆ ಜೀವ ಬೆದರಿಕೆ ಹಾಕಿ ಹೆದರಿಸುವ ಪ್ರಯತ್ನ ನಡೆಸಿ ಕೊನೆಗೆ ನೂರಾರು ಗ್ರಾಮಸ್ಥರು ಹುಂಚ ನಾಡಕಛೇರಿಯ ಮುಂಭಾಗ ಪ್ರತಿಭಟನೆಗೆ ಮುಂದಾದಾಗ ಎಚ್ಚೆತ್ತ ಹೊಸನಗರ ವಲಯ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮವಾಗಿ ಲಕ್ಷಾಂತರ ರೂ‌. ಮೌಲ್ಯದ ನಾಟಾ ಕಡಿದಿರುವುದು ಕಂಡಬಂದ ಹಿನ್ನಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ತರಾಟೆಗೆ ತೆಗೆದುಕೊಳ್ಳುವುದರೊಂದಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿಸ್ಥತರ ವಿರುದ್ದ ಕಾನೂನು ಕ್ರಮ ಜರುಗಿಸುವುದರೊಂದಿಗೆ ಅಕ್ರಮವಾಗಿ ಕಡಿತಲೆ ಮಾಡಲಾಗಿರುವ ನಾಟಾವನ್ನು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದುಕೊಳ್ಳುವಂತೆ ಸಹ ಪ್ರತಿಭಟನಾ ನಿರಂತರು ಆಗ್ರಹಿಸಿದರು.

ಇನ್ನೂ ಕಂದಾಯ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಭೂ ಕಬಳಿಕೆಯನ್ನು ತಡೆಮಾಡುವ ಮೂಲಕ ಗ್ರಾಮದ ಸರ್ವಾಂಗೀಣಾಭಿವೃದ್ದಿ ಕಾಯ್ದಿರಿಸುವಂತೆ ಪ್ರತಿಭಟನಾನಿರತರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಭೂ ಒತ್ತುವರಿಯನ್ನು ತೆರವು ಮಾಡಿ ಸರ್ಕಾರಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದು ಆದೇಶ ಬರುವ ತನಕ ನಮ್ಮ ಈ ಪ್ರತಿಭಟನೆ ಮುಂದುವರಿಸುವುಸುವುದಾಗಿ ಸಹ ಪ್ರತಿಭಟನಾ ನಿರತರು ಮಾಧ್ಯಮದವರಿಗೆ ತಿಳಿಸಿ, ಯಾವುದೇ ರಾಜಕೀಯ ಮತ್ತು ಅಧಿಕಾರಿಗಳ ಒತ್ತಡ ಬಂದರೂ ಒಂದು ಅಡಿ ಜಾಗವನ್ನು ಒತ್ತುವರಿದಾರನಿಗೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಹ ತಮ್ಮ ಆಕ್ರೋಶದ ಮಾತುಗಳೊಂದಿಗೆ ಮಾಧ್ಯಮವದರಿಗೆ ವಿವರಿಸಿದರು.

ಭೂ ಒತ್ತುವರಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ಪತ್ನಿ ಹೆಸರಿನಲ್ಲಿ ಮಾಡಲಾಗಿದೆ ಎಂಬ ಕೂಗು ಸಹ ಕೇಳಿಬಂದಿದೆ. ಯಾರೇ ಆಗಲಿ ಒಂದು ಅಡಿ ಜಾಗವನ್ನು ಕಬಳಿಸದಂತೆ ಇಲಾಖೆಯ ಅಧಿಕಾರಿಗಳು ಮಣಿಯದಂತೆ ಎಚ್ಚರಿಕೆ ನೀಡಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಗ್ರಾಮದ ಅಭಿವೃದ್ದಿಗೆ ಕಾಯ್ದಿರಿಸಲಾಗಿದೆ ಎಂದು ಆದೇಶ ಬರುವವರೆಗೂ ನಮ್ಮ ಹೋರಾಟ ನಡೆಯುತ್ತದೆಂದರು.

ಪ್ರತಿಭಟನೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗಿರೀಶ್, ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಆಶಾ ರವೀಂದ್ರ, ಹುಂಚ ಸೊಸೈಟಿ ಮಾಜಿ ಅಧ್ಯಕ್ಷ ಯಧುಕುಮಾರ್, ಹರೀಶ, ನಾಗೇಂದ್ರ ಕಲ್ಲೂರು, ಬಸಪ್ಪಗೌಡ ಸಮಟಗಾರು, ಸದಾನಂದ, ನಾಗೇಂದ್ರ, ರಾಜೇಂದ್ರ, ಶಿವಕುಮಾರ್, ಯಶೋಧ, ಮೀನಾಕ್ಷಿ, ನಾಗರತ್ನ, ನಾಗಭೂಷಣ, ಸದಾಶಿವ, ಶಿವಕುಮಾರ್, ಧರ್ಮರಾಜ್, ಪೂರ್ಣೇಶ್ ಮತ್ತಿತರರು ಇದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>