ಶಿವಮೊಗ್ಗ: ಬಗರ್ ಹುಕುಂ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡಲು ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಮನವಿ

Written by Koushik G K

Published on:

ಶಿವಮೊಗ್ಗ: ದೀರ್ಘಕಾಲದಿಂದ ಬಗರ್ ಹುಕುಂ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಹಕ್ಕು ಪತ್ರಗಳನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

📢 Stay Updated! Join our WhatsApp Channel Now →

ಮನವಿಯಲ್ಲಿ, 30-40 ವರ್ಷಗಳಿಂದ ಕೃಷಿಯನ್ನೇ ಅವಲಂಬಿಸಿಕೊಂಡು ಬದುಕು ಸಾಗಿಸುತ್ತಿರುವ ಅನೇಕ ರೈತರು 1990-91 ಹಾಗೂ 1998-99ರಲ್ಲಿ ಫಾರಂ ನಂ. 50 ಮತ್ತು 53 ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ತಿಳಿಸಲಾಗಿದೆ.

ಬಗರ್ ಹುಕುಂ ಸಮಿತಿ ಈಗಾಗಲೇ ಅನುಮೋದನೆ ನೀಡಿದ್ದರೂ, ಗ್ರಾಮ ಲೆಕ್ಕಾಧಿಕಾರಿಗಳು ವರದಿ ನೀಡದೆ, ಜಿಲ್ಲಾಧಿಕಾರಿಗಳ ಮೇಲೆ ನೆಪವಿಟ್ಟು ಅರ್ಜಿಗಳನ್ನು ನಿರಾಕರಿಸುತ್ತಿದ್ದಾರೆ ಎಂದು ಸಮಿತಿ ಸದಸ್ಯರು ಆರೋಪಿಸಿದ್ದಾರೆ.

ಸರ್ಕಾರಿ ಆದೇಶದ ಗೊಂದಲ

ಸಮಿತಿ ಸದಸ್ಯರು ಸರ್ಕಾರದ ಸುತ್ತೋಲೆಯ ಅರ್ಥವನ್ನು ತಪ್ಪಾಗಿ ಬಳಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ. “ಫಾರಂ-57 ಅಡಿಯಲ್ಲಿ ಅರ್ಜಿ ಸಲ್ಲಿಸಿದವರ ಭೂಮಿ ನಗರ ವ್ಯಾಪ್ತಿಯ 10 ಕಿ.ಮೀ. ಒಳಗಿದ್ದರೆ ಮಾತ್ರ ವರದಿ ನೀಡಬಾರದೆಂಬ ಆದೇಶವಿದೆ. ಆದರೆ, ಈ ಆದೇಶ ಫಾರಂ 50 ಮತ್ತು 53 ಅರ್ಜಿಗಳಿಗೆ ಅನ್ವಯಿಸುವುದಿಲ್ಲ” ಎಂದು ಅವರು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸರ್ವೇ ಇಲಾಖೆಯ ವರದಿ ಪ್ರಶ್ನೆ

ಈ ಹಿಂದೆ ಸರ್ವೇ ಇಲಾಖೆಯವರು ನೀಡಿದ ವರದಿ ಅವೈಜ್ಞಾನಿಕವಾಗಿದೆ ಎಂದು ಸಮಿತಿ ಸದಸ್ಯರು ಆರೋಪಿಸಿ, ಅದನ್ನು ಪುನರ್ ಪರಿಶೀಲಿಸಲು ಒತ್ತಾಯಿಸಿದ್ದಾರೆ. ಜೊತೆಗೆ, ಫಾರಂ 50 ಮತ್ತು 53ರ ಅರ್ಜಿಗಳನ್ನು ಪರಿಗಣಿಸಿ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮನವಿ ವೇಳೆ ಹಾಜರಿದ್ದವರು

ಬಗರ್ ಹುಕುಂ ಸಮಿತಿಯ ಸದಸ್ಯ ಎಸ್. ಗಿರೀಶ್ ಅವರ ನೇತೃತ್ವದಲ್ಲಿ ನಡೆದ ಮನವಿ ಸಲ್ಲಿಕೆ ಸಂದರ್ಭದಲ್ಲಿ ಕಲಗೋಡು ರತ್ನಾಕರ್, ನಾಗೇಂದ್ರಪ್ಪ ಫಾರಂ, ಸೊಗನೆ ಕೃಷ್ಣಪ್ಪ, ಪ್ರವೀಣ್, ಮಧುಸೂಧನ್, ವೇಲು ಕಲ್ಲಾಪುರ ಮಂಜಣ್ಣ, ವೆಂಕಟೇಶ್, ಕಟೀಕೆರೆ ಹುಚ್ಚಪ್ಪ, ಮಂಜುನಾಥ್, ಸಂಜಯ್, ಮಂಜನಾಯ್ಕ್ ಕಲ್ಲಾಪುರ, ಹರೀಶ್ ನಾಯ್ಕ ನಿದಿಗೆ, ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಸಾಗರ : ಅರಣ್ಯ ಭೂಮಿ ವಿವಾದ- ಸಭೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ

Leave a Comment