ಹೊಸನಗರ ; ಅವೈಜ್ಞಾನಿಕ ಶಿಕ್ಷಣ ನೀತಿ ಖಂಡಿಸಿ ಶಾಲೆ ಮುಂದೆ ಅಹೋರಾತ್ರಿ ಧರಣಿ

Written by Mahesha Hindlemane

Updated on:

ಹೊಸನಗರ ; ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಅವೈಜ್ಞಾನಿಕವಾಗಿ ಆದೇಶ ಮಾಡಿ ಎ.ಸಿ ಕಛೇರಿಯಲ್ಲಿ ಕುಳಿತವರಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಗೋಳು ಏನು ಅರ್ಥವಾಗುತ್ತದೆ ಎಂದು ಹೊಸನಗರದ ಜೂನಿಯರ್ ಕಾಲೇಜ್ ಹೈಸ್ಕೂಲ್ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್‌ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಹೈಸ್ಕೂಲ್ ವಿಭಾಗದ ಸುಮಾರು 365 ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ತಾರತಮ್ಯ ನೀತಿಯನ್ನು ಖಂಡಿಸಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹೊಸನಗರದ ತಹಸೀಲ್ದಾರ್ ರಶ್ಮಿ ಹಾಲೇಶ್‌ರಿಗೆ ಮನವಿ ಪತ್ರ ಸಲ್ಲಿಸಿ ಶಾಲೆಯ ಮುಂಭಾಗ ಅಹೋರಾತ್ರಿ ಧರಣಿ ಕುಳಿತ್ತಿದ್ದು ಈ ಸಂದರ್ಭದಲ್ಲಿ ಮಾತನಾಡಿದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/19qoFMsatA/

ನಮ್ಮ ಶಾಲೆಯಲ್ಲಿ ಮೂರೂ ಮಾಧ್ಯಮಗಳನ್ನು ಹೊಂದಿದ್ದು 9 ವಿಭಾಗಗಳಿರುತ್ತದೆ. ಈವರೆಗೆ ನಮ್ಮ ಶಾಲೆಯಲ್ಲಿ 2 ಕಲಾ (ಕನ್ನಡ) ಮತ್ತು 1 ಕಲಾ(ಉರ್ದು) ಹುದ್ದೆಗಳಿದ್ದು ಪ್ರಸ್ತುತ ವರ್ಗಾವಣೆ ನಿಯಮದ ಪ್ರಕಾರ ಒಂದು ಕಲಾ (ಉರ್ದು) ಹುದ್ದೆಯನ್ನು ಹೆಚ್ಚುವರಿಯೆಂದು ಪ್ರಸ್ತುತ ವರ್ಗಾವಣೆ ನಿಯಮದ ಪ್ರಕಾರ ಒಂದು ಕನ್ನಡ ಹುದ್ದೆಯನ್ನು ಹೆಚ್ಚುವರಿಯೆಂದು ಗುರುತಿಸಿ ಕನ್ನಡ ಹುದ್ದೆಯ ಶಿಕ್ಷಕರನ್ನು ವರ್ಗಾವಣೆ ಮಾಡಲು ಸಿದ್ಧತೆ ಮಾಡಿದ್ದು ಉರ್ದು ಶಿಕ್ಷಕರಿಂದಲೇ ಆಂಗ್ಲ ಮಾಧ್ಯಮದ ಕಲಾ ವಿಷಯ ಬೋಧಿಸುವಂತೆ ತಿಳಿಸಲಾಗಿದೆ. ಇದರಿಂದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅಸಾಧ್ಯವಾಗಿದೆ‌. ಶಿಕ್ಷಣ ಇಲಾಖೆಯ ಸುತ್ತೋಲೆಯ ಆಧಾರದಲ್ಲಿ ಒಬ್ಬ ಶಿಕ್ಷಕರನ್ನು ತೆಗೆಯಬೇಕೆಂಬ ಆದೇಶಕ್ಕೆ ವಿರುದ್ಧವಾಗಿ 365 ವಿದ್ಯಾರ್ಥಿಗಳು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಪ್ರತಿಭಟಿಸುತ್ತಿದ್ದಾರೆ.

ಸರ್ಕಾರದ ಅದೇಶಗಳು ವಿದ್ಯಾರ್ಥಿಗಳಿಗೆ ವಿರುದ್ಧವಾಗಿದ್ದು ಆದೇಶ ಮಾಡುವವರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿರುವುದರಿಂದ ಬಡ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕಷ್ಟ ಕೇಳುವವರಿಲ್ಲವಾಗಿದೆ. ಪ್ರತಿ ವರ್ಷ ಸರ್ಕಾರಿ ಶಾಲೆಗೆ 100% ಫಲಿತಾಂಶ ಬೇಕು ಎಂದು ಹೇಳುತ್ತಾರೆ. ಆದರೆ ಶಿಕ್ಷಕರನ್ನು ನೀಡುವುದರಲ್ಲಿ ತಾರತಮ್ಯ ನಡೆಸುತ್ತಾರೆ. ಇರುವುದು ಮೂರು ಮತ್ತೊಂದು ಶಿಕ್ಷಕರಿಗೆ ಮೊಟ್ಟೆ, ಬಾಳೆಹಣ್ಣು ಲೆಕ್ಕ ಮಾಡುವುದರಲ್ಲಿಯೇ ಸಮಯ ಕಳೆಯುತ್ತದೆ. ಪಾಠ ಮಾಡಲು ಸಮಯವೆಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಹೋರಾತ್ರಿ ಧರಣಿ :

ರಾಜ್ಯದಲ್ಲಿಯೇ ಅವೈಜ್ಞಾನಿಕ ಶಿಕ್ಷಣ ನೀತಿಯ ವಿರುದ್ಧ ಧ್ವನಿ ಎತ್ತಿರುವುದು ನಮ್ಮ ಶಾಲೆಯ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೆ ಧರಣಿ ಮುಂದುವರೆಸುತ್ತೇವೆ‌. ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಬಂದು ನಮ್ಮ ಸಮಸ್ಯೆಯನ್ನು ಆಲಿಸಿ ನ್ಯಾಯ ಕೊಡಿಸುವವರೆಗೆ ಈ ಶಾಲೆಯ ಯಾವುದೇ ವಿದ್ಯಾರ್ಥಿಗಳು ಮನೆಗೆ ಹೋಗುವುದಿಲ್ಲ. ಅಹೋರಾತ್ರಿ ಧರಣಿ ನಡೆಸಲಿದ್ದು ವಿದ್ಯಾರ್ಥಿಗಳೊಂದಿಗೆ ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಪತ್ರಿಭಟನಾ ಧರಣಿಯಲ್ಲಿ ಶಾಲೆಯ 365 ವಿದ್ಯಾರ್ಥಿಗಳು ಎಸ್‌ಡಿಎಂಸಿ ಸದಸ್ಯರಾದ ಹರೀಶ, ಸತ್ಯನಾರಾಯಣ, ಮಂಜುನಾಥ, ಪ್ರಕಾಶ, ಚಿದಾನಂದ, ಯೋಗೇಂದ್ರ, ಪ್ರದೀಪ, ಶ್ರೀಧರ, ಯೋಗೇಂದ್ರ, ಶ್ರೀಧರ ಆಚಾರ್, ಭುವನೇಶ್ವರಿ, ವಾಸಂತಿ, ಕವಿತಾ, ಮಮತಾ, ರಿಶಾದ್‌ಬಾನು, ಗೀತಾ, ತುಳಸಿ, ಲಕ್ಷ್ಮಿ, ಸುಧಾ, ಜಯಂತಿ, ರುಕ್ಮಿಣಿ ಇನ್ನೂ ಮುಂತಾದವರು ಪಾಲ್ಗೊಂಡಿದ್ದಾರೆ.

Leave a Comment