ತೀರ್ಥಹಳ್ಳಿಯಿಂದ ಧರ್ಮಸ್ಥಳದತ್ತ ಧರ್ಮ ರಕ್ಷಣಾ ಯಾತ್ರೆ: ಶಾಸಕ ಆರಗ ಜ್ಞಾನೇಂದ್ರ ನೇತೃತ್ವ

Written by Koushik G K

Published on:

ತೀರ್ಥಹಳ್ಳಿ : ಧರ್ಮದ ರಕ್ಷಣೆಯ ಹೋರಾಟದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡುವ ಸಲುವಾಗಿ ತೀರ್ಥಹಳ್ಳಿಯಿಂದ ಧರ್ಮಸ್ಥಳದತ್ತ ಭವ್ಯ ‘ಧರ್ಮ ರಕ್ಷಣಾ ಯಾತ್ರೆ’ ಹೊರಟಿದೆ. ಈ ಯಾತ್ರೆಗೆ ಶಾಸಕ ಆರಗ ಜ್ಞಾನೇಂದ್ರ ಅವರು ನೇತೃತ್ವ ವಹಿಸಲಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದು ಬೆಳಿಗ್ಗೆ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಾಲಯದಿಂದ ಯಾತ್ರೆ ಆರಂಭವಾಗಿದೆ .ಖಾಸಗಿ ಕಾರುಗಳು ಹಾಗೂ ಅನೇಕ ವಾಹನಗಳಲ್ಲಿ ಭಕ್ತಾದಿಗಳು ಧರ್ಮಸ್ಥಳದತ್ತ ಪ್ರಯಾಣ ಬೆಳೆಸಲಿದ್ದಾರೆ. ಯಾತ್ರಿಕರು ಮೊದಲು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿ, ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಅದಾದ ಬಳಿಕ ಧರ್ಮಾಧಿಕಾರಿಗಳಿಗೆ “ನಾವು ಎಲ್ಲರೂ ನಿಮ್ಮ ಜೊತೆಗೆ ಇದ್ದೇವೆ” ಎಂಬ ದೃಢ ಅಭಯ ಸಂದೇಶ ನೀಡಲಾಗುತ್ತದೆ. ಸಂಜೆ ವೇಳೆಗೆ ಯಾತ್ರಿಕರು ತೀರ್ಥಹಳ್ಳಿಗೆ ವಾಪಾಸಾಗಲಿದ್ದಾರೆ.

Leave a Comment