ಕಳಸ ; ಕಳಸ ಪಿಎಸ್ಐ ನಿತ್ಯಾನಂದ ಗೌಡ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪ ಕೇಳಿಬಂದಿದ್ದು, ಅವರ ಪತ್ನಿ ನೀಡಿರುವ ದೂರಿನಂತೆ ನಿತ್ಯಾನಂದ ಗೌಡರ ವಿರುದ್ಧ ಕಳಸ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಮಿತಾ ನಿತ್ಯಾನಂದ ಗೌಡ ಜ.17ರಂದು ರಾತ್ರಿ ಕಳಸ ಠಾಣೆಗೆ ನೀಡಿರುವ ದೂರಿನಲ್ಲಿ ತನ್ನ ಪತಿ ನಿತ್ಯಾನಂದ ಗೌಡ ಜ.17ರಂದು ತಾವಿರುವ ಪೊಲೀಸ್ ಕ್ವಾಟರ್ಸ್ ಗೆ ತನ್ನನ್ನು ಕರೆಸಿಕೊಂಡು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. 50 ಲಕ್ಷ ರೂ. ವರದಕ್ಷಿಣೆ ನೀಡಬೇಕು, ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ನಿತ್ಯಾನಂದ ಗೌಡರ ತಂಗಿ ಮೇನಕಾ ಗಂಡ ಚಂದ್ರಕಾಂತ್ ಕೊಠಾರಿ ಕೂಡಾ ದಬಾಯಿಸಿ, ಹಲ್ಲೆಗೆ ಮುಂದಾಗಿದ್ದಾನೆ ಎಂದು ಅಮಿತಾ ದೂರಿದ್ದಾರೆ.
ಈ ಬಗ್ಗೆ ಕಳಸ ಪಿಎಸ್ಐ ನಿತ್ಯಾನಂದ ಗೌಡ, ಅವರ ತಂಗಿ ಮೇನಕಾ, ಬಾವ ಚಂದ್ರಕಾಂತ್ ಕೊಠಾರಿ ಹಾಗೂ ತಾಯಿ ಪ್ರೇಮಾ ಕುಮಾರ್ ಗೌಡ ವಿರುದ್ಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.