HOSANAGARA ; ಈಕೆ ಹೆಸರು ಕು. ಅರ್ಚನಾ ಹೊಸನಗರ ತಾಲೂಕು ನಗರ ಹೋಬಳಿಯ ಸಂಪೆಕಟ್ಟೆ ಬಳಿಯ ಕೊಡಸೆ ಹೆಬ್ಬುರಳಿಯ ತೀರಾ ಬಡ ಕುಟುಂಬದ ಕೃಷಿಕ ಕೃಷ್ಣ ಹಾಗೂ ಕಲಾವತಿ ದಂಪತಿಗಳ ಪುತ್ರಿ. ಈಕೆ ಕೇವಲ 3.11 ಅಡಿ ಎತ್ತರ ಹೊಂದಿದ್ದು ಈ ಕುಬ್ಜತೆ ಇವಳ ಸಾಧನೆಗೆ ಅಡ್ಡಿಯಾಗದೆ ಅವಳನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದೆ.

ಹೌದು, 17 ವರ್ಷ ವಯೋಮಿತಿಯೊಳಗಿನ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 3 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಹೊಸನಗರ ಮಲೆನಾಡು ಪ್ರೌಢ ಶಾಲೆಯ 9ನೇ ತರಗತಿಯ ಓದುತ್ತಿರುವ ಈಕೆ 3 ಸಾವಿರ ಮೀ. ಓಟವನ್ನು 11.4 ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಶಾಸಕ ಬೇಳೂರು ಗೋಪಾಲಕೃಷ್ಣ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಕೃಷ್ಣಮೂರ್ತಿ ಮಲ್ನಾಡ್ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ದೈಹಿಕ ಶಿಕ್ಷಕರು, ತರಬೇತುದಾರರು, ಶಿಕ್ಷಕೇತರರು, ವಿದ್ಯಾರ್ಥಿ ವೃಂದದವರು ಇವಳ ಸಾಧನೆ ಕೊಂಡಾಡಿ ರಾಜ್ಯ ಮಟ್ಟದಲ್ಲೂ ಉತ್ತಮ ಸಾಧನೆ ಹೊಂದುವಂತೆ ಹಾರೈಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.