ಕ್ರೀಡೆಗಳು ಗುರು ಶಿಷ್ಯರನ್ನು ಒಂದು ಮಾಡುವ ಕೊಂಡಿ ; ತಹಶೀಲ್ದಾರ್ ರಶ್ಮಿ ಹಾಲೇಶ್

Written by malnadtimes.com

Updated on:

HOSANAGARA ; ಯಾವುದೇ ಕ್ರೀಡಾಕೂಟಗಳನ್ನು ಆಡುವಾಗ ಕ್ರೀಡಾಪಟುಗೆ ಗುರುವಿದ್ದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯವೆಂದು ತಹಶೀಲ್ದಾರ್ ರಶ್ಮಿ ಹಾಲೇಶ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ನೆಹರು ಮೈದಾನದ ಆವರಣದಲ್ಲಿ ದಿವಂಗತ ಜಾನ್ ವಿಲ್ಸನ್‌ರವರ ಸ್ಮರಣಾರ್ಥ 15 ದಿನಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವಾಲಿಬಾಲ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯೊಂದು ಸ್ಪೂರ್ತಿದಾಯಕ ಕ್ರೀಡೆಯಿಂದ ಮಕ್ಕಳ ಮನಸ್ಸು ಸ್ಥಿರವಾಗಿರುತ್ತದೆ ಮಕ್ಕಳು ಆಟವಾಡುವುದರಿಂದ ಯಾವುದೇ ಖಾಯಿಲೆಗಳಿಗೆ ಅವಕಾಶಗಳಿರುವುದಿಲ್ಲ ಹಾಗೂ ದುಶ್ಚಟಗಳಿಂದ ದೂರವಿರುತ್ತಾರೆ ಪ್ರತಿಯೊಬ್ಬರು ದಿನಕ್ಕೆ ಒಂದು ಗಂಟೆ ಕ್ರೀಡೆ-ವ್ಯಾಯಾಮ ಮಾಡುವುದರಿಂದ ಆರೋಗ್ಯವಂತನಾಗಿರಲು ಸಾಧ್ಯ ಎಂದರು.

ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ ; ಎಂ ಎನ್ ಸುಧಾಕರ್

ಯಾವುದೇ ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಈ ನಿಟ್ಟಿನಲ್ಲಿ ಜಿಮ್ಮಿ ಜಾರ್ಜ್ ವಾಲಿಬಾಲ್ ಕ್ಲಬ್ ರಾಷ್ಟ್ರೀಯ ತರಬೇತುದಾರರಾದ ದಿವಂಗತ ಜಾನ್ ವಿಲ್ಸನ್ ಗೋನ್ಸಾಲ್ವಿಸ್ ಅವರ ಸ್ಮರಣಾರ್ಥ ಈ ಒಂದು ವಾಲಿಬಾಲ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಎಂ ಎನ್ ಸುಧಾಕರ ತಿಳಿಸಿದರು.

ಬಹಳಷ್ಟು ವರ್ಷಗಳಿಂದ ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ಇಂತಹ ಹಲವಾರು ಕ್ರೀಡಪಟುಗಳಿಗೆ ಪೂರಕವಾಗುವಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿ ಯಶಸ್ವಿ ಆದಂತಹ ಈ ಸಂಸ್ಥೆ ಇದರ ಪದಾಧಿಕಾರಿಗಳು ಸದಸ್ಯರು ಹಾಗೂ ಹಲವರ ಸಹಾಯದಿಂದ ಇಂತಹ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪೋಷಕರು ಶಿಕ್ಷಣಕ್ಕೆ ಎಷ್ಟು ಆದ್ಯತೆಯನ್ನು ನೀಡುತ್ತಾರೋ ಅಷ್ಟೇ ಆದ್ಯತೆಯನ್ನು ನೀಡಬೇಕು. ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವವರಲ್ಲಿ ಕ್ರೀಡಾಪಟುಗಳು ಬಹಳಷ್ಟು ಇದ್ದಾರೆ ಇದನ್ನು ಪೋಷಕರು ಮನಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಪ್ರತಿ ವರ್ಷವು ಇಂತಹದೊಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಯಾದ ರಶ್ಮಿ, ಮಾಜಿ ಅಧ್ಯಕ್ಷ ಇಲಿಯಾಸ್, ಎಂ.ಪಿ. ಸುರೇಶ್, ಪಟ್ಟಣ ಪಂಚಾಯಿತಿಯ ಸದಸ್ಯ ಗುರುರಾಜ್, ನಾಗೇಶ್, ಉಷಾ, ಧನಂಜಯ, ನವೀನ, ಅಖಿಲೇಶ್ ಮುಂತಾದವರು ಉಪಸ್ಥಿತರಿದ್ದರು.

Leave a Comment