Ganga kalyana:ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಜನಾಂಗದವರಿಗೆ ಗಂಗಾ ಕಲ್ಯಾಣ ಯೋಜನೆಯ ಸಂಬಂಧ ನಿಗದಿತ ಗುರಿಗಳಿಗೆ ತಕ್ಕಷ್ಟು ಅದರ ಫಲಾಪೇಕ್ಷಿಗಳಿಂದ ಅರ್ಜಿಗಳು ಬಾರದಿರುವುದರಿಂದ ಮತ್ತೊಮ್ಮೆ ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ..
Read More:LED Bulb | ಎಲ್‌ಇಡಿ ಹೆಡ್‌ಲೈಟ್ ಅಳವಡಿಸಿಕೊಂಡ ವಾಹನಗಳ ಮಾಲೀಕರೇ ದಂಡ ಕಟ್ಟಲು ಸಜ್ಜಾಗಿ !
ಇದಕ್ಕೆ ಯಾವ ಯಾವ ಜಿಲ್ಲೆಗಳ ರೈತರಿಂದ ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ. ಇದಕ್ಕೆ ಅರ್ಜಿ ಸಲ್ಲಿಕೆ ನಿಮಗೆ ಬೇಕಾಗಿರುವ ಅಗತ್ಯಗಳೇನು, ಏನೇನು ದಾಖಲೆಗಳನ್ನು ನೀಡಬೇಕು, ಎಲ್ಲಿ ಅರ್ಜಿ ಹಾಕಬೇಕು, ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಯಾವುದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಿರಿ
ಗಂಗಾ ಕಲ್ಯಾಣ ಯೋಜನೆ ಅರ್ಹತೆ
ಮೊದಲನೆಯದಾಗಿ ಗಂಗಾ ಕಲ್ಯಾಣ ಯೋಜನೆಯ ಫಲಾಪೇಕ್ಷಿ ಒಂದು ಎಕರೆಯಿಂದ ಐದು ಎಕರೆ ವ್ಯವಸಾಯ ಜಮೀನು ಹೊಂದಿದ್ದು, ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದುಕೊಂಡಿರದ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಪಂಪ್ ಮೋಟರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ,ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಗಂಗಾ ಕಲ್ಯಾಣ ಯೋಜನೆ ಗೆ ಯಾರು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಕೆ ನಿಮಗೆ ಬೇಕಾಗಿರುವ ಅಗತ್ಯಗಳು ಯಾವುವು ಅನ್ನೋದನ್ನ ನೋಡೋದಾದ್ರೆ ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.ಈ ಮೂರೂ ನಿಗಮಗಳಲ್ಲಿ ಯಾವ ನಿಗಮಕ್ಕೆ ನೀವು ಅರ್ಜಿ ಸಲ್ಲಿಸಿದಿರೋ ಆ ನಿಗಮಕ್ಕೆ ಸಂಬಂಧಪಟ್ಟ ಜಾತಿಯವರು ನೀವಾಗಿರಬೇಕು. ಫಲಾನುಭವಿಯ ವಯಸ್ಸು ಕನಿಷ್ಠ 18 ವರ್ಷದ ಮೇಲಿರ ಬೇಕು.ಸಣ್ಣ ಮತ್ತು ಅತಿ ಸಣ್ಣ ರೈತರಿಗೆಬೇಕಾಗುತ್ತೆ. ಸರ್ಕಾರದ ಅಥವಾ ನಿಗಮದ ಬೇರೆ ಯಾವುದಾದರೂ ಯೋಜನೆಗಳಲ್ಲಿ ಸಾಲ ಅಥವಾ ಇತರ ಯಾವುದೇ ಆರ್ಥಿಕ ಸವಲತ್ತನ್ನು ನೀವು ಪಡೆದಿರಬಾರದು. ಫಲಾನುಭವಿ ಯಾವುದೇ ಸರ್ಕಾರಿ ನೌಕರಿಯಲ್ಲಿರಬಾರದು.
ಇದಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್‌ಪುಸ್ತಕ
- ಪಾಸ್‌ಪೋರ್ಟ್‌ನ ಎರಡು ಫೋಟೋ
ಒಂದರಿಂದ ಐದು ಎಕರೆ ವ್ಯವಸಾಯದ ಜಮೀನು ಹೊಂದಿರುವ ಅರ್ಹ ಫಲಾಪೇಕ್ಷಿಗಳು ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಮುಖಾಂತರ ಫಲಾಪೇಕ್ಷೆಯ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆದು ಪಂಪ್ ಮೋಟರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಯಾವ ಜಿಲ್ಲೆಗಳ ರೈತರಿಂದ ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ
ವಿರಾಜಪೇಟೆ ಕ್ಷೇತ್ರದಲ್ಲಿ ಡಾ ಬಿ.ಆರ್. ಅಂಬೇಡ್ಕರ್ ಅಭಿವದ್ಧಿ ನಿಗಮದಿಂದ 13 ಕೊಳವೆಬಾವಿಗಳು, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ 10 ಕೊಳವೆ ಬಾವಿಗಳು ಹಾಗೂ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಒಂದು ಕೊಳವೆ ಬಾವಿಗಳನ್ನು ಕೊರೆದು ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ.ಒಟ್ಟು 24 ಕೊಳವೆ ಬಾವಿಗಳನ್ನು ಕೊರೆದು ನೀರಾವರಿ ಸೌಲಭ್ಯವನ್ನು ಒದಗಿಸಲಿಕ್ಕೆ ಈಗ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ.
ಕೊಡಗಿನ ವಿರಾಜಪೇಟೆ ತಾಲೂಕಿನ ಎಸ್ ಸಿ ಜನಾಂಗಕ್ಕೆ ಸೇರಿದ ರೈತರು ತಮ್ಮ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆ ಮುಖಾಂತರ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ಅರ್ಜಿ ಹಾಕಬೇಕು ಅಂತ ಇದ್ದವರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅರ್ಜಿಯನ್ನು ಪಡೆದು ಅದೇ ಜಿಲ್ಲಾಧಿಕಾರಿಯವರ ಕಚೇರಿಗೆ ಜೂನ್ 29, 2024 ರ ಒಳಗಾಗಿ ವರದಿಯನ್ನು ಸಲ್ಲಿಸಬೇಕು