ಸಾಗರ :ತಾಲ್ಲೂಕಿನ ಬಳಸಗೋಡ ಪ್ರದೇಶದಲ್ಲಿ ಜನರು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆಂಬ ಕಾರಣಕ್ಕಾಗಿ ಅರಣ್ಯ ಇಲಾಖೆಯವರು ನೋಟಿಸ್ ನೀಡಿದ್ದರು. ಈ ಕ್ರಮ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿ ಪ್ರತಿಭಟನೆಗೂ ಕಾರಣವಾಗಿತ್ತು. ಈ ಹಿನ್ನೆಲೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅರಣ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಇಂದು ಸಾಗರದ ಪ್ರವಾಸಿ ಮಂದಿರದಲ್ಲಿ ನಡೆದ ಅರಣ್ಯಾಧಿಕಾರಿಗಳ ಸಭೆಯಲ್ಲಿ ಶಾಸಕ ಬೇಳೂರು ಅವರು, “ನನ್ನ ಗಮನಕ್ಕೆ ಬಾರದೇ ಜನರಿಗೆ ನೋಟಿಸ್ ನೀಡುವುದು ಸರಿಯಲ್ಲ” ಎಂದು ಅಧಿಕಾರಿಗಳನ್ನು ಖಡಕ್ ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ಸಂದರ್ಭದಲ್ಲೂ ಜನರ ವಿರುದ್ಧ ನೋಟಿಸ್ ಹೊರಡಿಸುವ ಮೊದಲು ತಮಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಬಳಸಗೋಡ ಪ್ರದೇಶದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿ ನಿರ್ಮಾಣದ ಯೋಜನೆ ಇದೆ. ಇದಕ್ಕಾಗಿ 100 ಎಕರೆ ಭೂಮಿ ಅಗತ್ಯವಿದ್ದು, ಪ್ರಸ್ತುತ ಅಲ್ಲಿ ಕೇವಲ 80 ಎಕರೆ ಮಾತ್ರ ಲಭ್ಯವಿದೆ ಎಂದು ಅವರು ತಿಳಿಸಿದರು. “ಭೂಮಿ ಸಂಬಂಧ ಯಾವುದೇ ಗೊಂದಲಗಳು, ಒತ್ತುವರಿ ಪ್ರಕರಣಗಳು ನಡೆಯದಂತೆ ಇಲಾಖೆ ತಕ್ಷಣ ಕ್ರಮವಹಿಸಬೇಕು” ಎಂದು ಸೂಚಿಸಿದರು.
ಬೆಳ್ಳಂದೂರು ಅರಣ್ಯ ಭೂಮಿ ವಿಚಾರವನ್ನೂ ಅವರು ಸಭೆಯಲ್ಲಿ ಚರ್ಚಿಸಿದರು. “ಕಾನೂನು ಪ್ರಕಾರ ಗೇಣಿದಾರರಿಗೆ ಮೂರು ಎಕರೆ ಭೂಮಿಯನ್ನು ಬಗರ್ ಹುಕುಂ ಅಡಿಯಲ್ಲಿ ನೀಡಬಹುದು. ಈ ಹಂಚಿಕೆ ಪ್ರಕ್ರಿಯೆ ಸಂಪೂರ್ಣ ಕಾನೂನುಬದ್ಧವಾಗಿರಬೇಕು. ಆದರೆ ಸಾಗರ ತಾಲ್ಲೂಕಿನಲ್ಲೇ ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಆಗದಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು” ಎಂದು ಬೇಳೂರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಸಾಗರ ಡಿಎಫ್ಓ ಮೋಹನ್ ಕುಮಾರ್, ಎಸಿಎಫ್ ರವಿ ಕೆ., ರವೀಂದ್ರ ನಾಯಕ್, ವೈಲ್ಡ್ ಲೈಫ್ ಕಾರ್ಗಲ್ ಪ್ರಭಾರ ಉಪ ವಲಯ ಅರಣ್ಯಾಧಿಕಾರಿ ಸಿಂಧು, ಸಾಗರ ಆರ್ಎಫ್ಓ ಅಣ್ಣಪ್ಪ, ಕೂಗಾರು ಆರ್ಎಫ್ಓ ಮಹೇಶ್, ಅಂಬಾರಗೋಡ್ಲು ಆರ್ಎಫ್ಓ ಶಾಂತಪ್ಪ ಪೂಜಾರ್, ಹೊಸನಗರ ಆರ್ಎಫ್ಓ ಅನಿಲ್ ಕುಮಾರ್, ಕಾರ್ಗಲ್ ಆರ್ಎಫ್ಓ ರಾಘವೇಂದ್ರ ಅಗಸೆ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದ
ಪೌರ ಕಾರ್ಮಿಕರು, ರೈತರು, ಸೈನಿಕರು ದೇವರ ಸುಪುತ್ರರು ; ಬೇಳೂರು ಗೋಪಾಲಕೃಷ್ಣ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650