ರಿಪ್ಪನ್‌ಪೇಟೆ ; ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯುವಕನೋರ್ವ ಏಕಾಏಕಿ ನುಗ್ಗಿ ವಾರ್ಡ್‌ನಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ತನ್ನ ಅಣ್ಣ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಸಾವನ್ನಪ್ಪಿರುವ ವಿಷಯದಿಂದಾಗಿ ಕುಪಿತಗೊಂಡ ಯುವಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಏಕಾಏಕಿ ವೈದ್ಯಾಧಿಕಾರಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಎದುರೆ ವಾರ್ಡ್‌ನಲ್ಲಿನ ಪೀಠೋಪಕರಣಗಳನ್ನು ಹಾಳು ಮಾಡಿ ಮುರಿದು ಹಾಕಿದ್ದಾನೆನ್ನಲಾಗಿದೆ.
ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ ಎನ್ನಲಾಗಿದೆ. ಈ ರೀತಿಯ ಘಟನೆಯಿಂದಾಗಿ ಇಲ್ಲಿನ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ಹಿಂದೆ-ಮುಂದೆ ನೋಡುವಂತಾಗಿದ್ದಾರೆ.
ಮೊದಲೇ ಸರ್ಕಾರಿ ಆಸ್ಪತ್ರೆ ಎಂದರೆ ಭಯಪಡುವ ಸ್ಥಿತಿಯಿದ್ದು ಸಕಾಲದಲ್ಲಿ ಸೂಕ್ತ ವೈದ್ಯಾಧಿಕಾರಿಗಳು ಸಿಗುವುದಿಲ್ಲ ಎಂದು ಸಾಕಷ್ಟು ದೂರುಗಳಿದ್ದು ಸ್ಥಳೀಯ ಶಾಸಕರ ವಿಶೇಷ ಆಸಕ್ತಿಯಿಂದಾಗಿ ಸಕಾಲದಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಲಾದರೂ ಕೂಡಾ ಈ ರೀತಿಯಲ್ಲಿ ದಾಂಧಲೇ ಮಾಡಿ ಇರುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಲ್ಲಿ ಭಯ ಹುಟ್ಟಿಸಿ ಆಸ್ಪತ್ರೆಯವರಿಗೆ ಭದ್ರತೆಯಿಲ್ಲದೆ ಇರುವುದರ ಬಗ್ಗೆ ಕೆಲಸ ಮಾಡುವುದಾದರು ಹೇಗೆ? ಎಂಬ ಪ್ರಶ್ನೆ ಕಾಡುವಂತಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





