ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರ ಹೊಂಬುಜದ ವಾರ್ಷಿಕ ರಥಯಾತ್ರಾ ಮಹೋತ್ಸವದ ಪೂರ್ವದಲ್ಲಿ ಶ್ರೀ ಭಕ್ತಾಮರ ಆರಾಧನೆಯನ್ನು ಕ್ಷೇತ್ರದ ನಗರ ಜಿನಾಲಯದ ಶ್ರೀ ಆದಿನಾಥ ತೀರ್ಥಂಕರ ಸನ್ನಿಧಿಯಲ್ಲಿ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ನೆರವೇರಿತು.
ಭಕ್ತರ ಅಪೇಕ್ಷೆಗಳು ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿ, ಆರಾಧನೆ ವಿಧಿ-ವಿಧಾನದಲ್ಲಿ ಪಾಲ್ಗೊಳ್ಳುವುದು ಧಾರ್ಮಿಕ ಮನೋಭಾವ ಉದ್ಧೀಪನವಾಗುವುದೆಂದು ಪೂಜ್ಯ ಶ್ರೀಗಳವರು ತಿಳಿಸಿದರು.