ಹೊಸನಗರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕನ್ನು ಜಿಲ್ಲೆ ಮಡಬೇಕೆಂದು ಹೊಸನಗರ ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ ನೇತೃತ್ವದಲ್ಲಿ ಒಂದು ದಿನ ನ್ಯಾಯಾಲಯದ ಕಲಾಪದಿಂದ ಹೊರಗೆ ಉಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಪ್ಪ, ಹೊಸನಗರ ಕ್ಷೇತ್ರಕ್ಕೆ ಸಾಗರ ಸಮೀಪವಾಗುವುದರಿಂದ ಹಾಗೂ ನಗರ, ನಿಟ್ಟೂರು, ಸಂಪೆಕಟ್ಟೆ, ಸೊನಲೆ, ಬಿಲ್ಲೋಡಿ ವಿವಿಧ ಗ್ರಾಮಗಳ ಜನತೆಗೆ ಶಿವಮೊಗ್ಗ ದೂರವಾಗುತ್ತಿರುವುದರಿಂದ ಸಾಗರ ಜಿಲ್ಲೆ ಮಾಡುವುದರಿಂದ ಹೊಸನಗರ ಕ್ಷೇತ್ರದ ಜನತೆಗೆ ಅನುಕೂಲಕರವಾಗುತ್ತದೆ ಸರ್ಕಾರ ತಕ್ಷಣ ಗಮನ ಹರಿಸಿ ಸಾಗರ ಜಿಲ್ಲೆಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಕೀಲರಾದ ವಾಲೆಮನೆ ಶಿವಕುಮಾರ್, ಉಮೇಶ್, ಮಹಾದೇವಪ್ಪ, ವಿಜಯಕುಮಾರ್, ಗಗ್ಗ ಬಸವರಾಜ್, ಮೋಹನ್ ಶೆಟ್ಟಿ, ಷಣ್ಮುಖಪ್ಪ, ಲೋಕೇಶ್ ಇನ್ನೂ ಮುಂತಾದ ವಕೀಲರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.