ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಸನಗರ ಶಾಸಕರ ಶಾಲೆ ಸರ್ಕಲ್ ಕಲ್ಲುಗಳು !

Written by Mahesha Hindlemane

Published on:

ಹೊಸನಗರ ; ಪಟ್ಟಣದ ಹೃದಯ ಭಾಗದಲ್ಲಿರುವ ಶಾಸಕರ ಶಾಲೆ ಸರ್ಕಲ್‌ನಲ್ಲಿ ಸುಮಾರು ನೂರಾರು ವರ್ಷಗಳ ಹಿಂದೆ ಕಲ್ಲುಗಳಿಂದ ಸರ್ಕಲ್‌ಗಳನ್ನು ನಿರ್ಮಿಸಿ ಸ್ಕೂಲ್ ಸರ್ಕಲ್ ಎಂದು ನಾಮಕರಣ ಮಾಡಿದ್ದರು. ಸಂಜೆ ವೇಳೆಯಲ್ಲಿ ಹೊಸನಗರ ಪಟ್ಟಣದ ಹಿರಿಯ ನಾಗರೀಕರು ಹಾಗೂ ಕೆಲಸ ಮಾಡಿ ಧಣಿವಾರಿಸಿಕೊಳ್ಳಲು ಹಾಗೂ ಸ್ನೇಹಿತರೆಲ್ಲ ಒಟ್ಟುಗೂಡಿ ಹರಟೆ ಹೊಡೆಯುವ ಸರ್ಕಲ್ ಇದಾಗಿತ್ತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಸರ್ಕಲ್ ಸುತ್ತ-ಮುತ್ತ ಮುಂಭಾಗದಲ್ಲಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಪಕ್ಕದಲ್ಲಿಯೇ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಿಂಭಾಗದಲ್ಲಿ ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯತಿ ಕಾರ್ಯಾಲಯ, ಬೇಳೂರು ಗೋಪಾಲಕೃಷ್ಣ ಶಾಸಕರ ಕಚೇರಿ ಆರಗ ಜ್ಞಾನೇಂದ್ರರ ಶಾಸಕರ ಕಚೇರಿ, ಸ್ಪೋಟ್ಸ್ ಅಸೋಸಿಯೇಷನ್ ಕ್ಲಬ್‌ಗಳಿದ್ದು ಅದು ಅಲ್ಲದೇ ಕಂದಾಪುರಕ್ಕೆ ಹೋಗುವ ಮುಖ್ಯ ರಸ್ತೆಯಾಗಿರುತ್ತದೆ.

ಈ ಸರ್ಕಲ್ ಸುಂದರವಾಗಿ ಹಳೆಯ ಕಲ್ಲುಗಳಿಂದ ನಿರ್ಮಿಸಲಾಗಿರುವುದರಿಂದ ಹಳೆ ಕಾಲದ ಕಲ್ಲು ಆಗಿರುವುದರಿಂದ ಸರ್ಕಲ್‌ಗೆ ಒಳ್ಳೆಯ ಕಲೆಯಿತ್ತು ಹಾಗೂ ಸುಂದರವಾಗಿತ್ತು. ಆದರೆ ಒಂದೆರಡು ವರ್ಷಗಳ ಹಿಂದೆ ಎತ್ತರವಾಗಿ ಸುಂದರವಾಗಿ ನಿರ್ಮಿಸಿರುವ ಗೋಪುರವಾಗಿ ನಿರ್ಮಿಸಿರುವ 6 ಕಲ್ಲುಗಳಲ್ಲಿ ಸುಮಾರು ಕಲ್ಲುಗಳ ಮಧ್ಯ ಭಾಗದಲ್ಲಿ ಬಿರುಕುಂಟಾಗಿದೆ. ಈ ಕಲ್ಲುಗಳು ಸುಮಾರು ಆರು ಅಡಿಯಷ್ಟು ಎತ್ತರವಾಗಿತ್ತು ಮೇಲ್ಭಾಗದಿಂದ ಕಲ್ಲುಗಳು ಕೆಳಭಾಗಕ್ಕೆ ಬಿದ್ದರೆ ಮಕ್ಕಳ, ಅಥವಾ ಸಾರ್ವಜನಿಕರ ತಲೆಯ ಮೇಲೆ ಆಕಸ್ಮಿಕವಾಗಿ ಬಿದ್ದರೆ ಖಂಡಿತ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ.

ಇದರ ಕೂಗಳತೆ ದೂರದಲ್ಲೇ ಶಾಸಕರಾದ ಬೇಳೂರು ಗೋಪಾಲಕೃಷ್ಣರ ಹಾಗೂ ಆರಗ ಜ್ಞಾನೇಂದ್ರರ ಕಚೇರಿಯು ಇರುವುದರಿಂದ ಓಡಾಟ ನಡೆಸುತ್ತಿರುತ್ತಾರೆ. ಇವರ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ತಹಸೀಲ್ದಾರ್, ಇಒ ಮತ್ತು ಈ ಕಛೇರಿಗೆ ಸಂಬಂಧಪಟ್ಟ ಅಧಿಕಾರಿಗಳು ಈ ಸರ್ಕಲ್ ಬಳಿಯೇ ಓಡಾಟ ನಡೆಸುತ್ತಿದ್ದರೂ ಯಾರು ಈ ಬಗ್ಗೆ ತಲೆಕೆಡೆಸಿಕೊಂಡಿಲ್ಲ. ಅನಾಹುತವಾದ ಮೇಲೆ ಸರಿಪಡಿಸೋಣ ಎಂದು ಕಾಯುತ್ತಿರುವಂತೆ ಕಾಣುತ್ತಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಈ ಸರ್ಕಲ್‌ನಲ್ಲಿರುವ ಕಲ್ಲುಗಳನ್ನು ದುರಸ್ಥಿಪಡಿಸಿಲಿ ಹೋಗುವ ಜೀವ ಉಳಿಸಲಿ.

ಸುಮಾರು ಆರು ತಿಂಗಳಿಂದ ಹೊಸನಗರದ ಪಟ್ಟಣ ಪಂಚಾಯತಿ ಆಡಳಿತ ಮಂಡಳಿಗೆ ಹಾಗೂ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ಸಲ್ಲಿಸಿದ್ದೇವೆ. ಒಂದೆರಡು ಬಾರಿ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಒಂದೆರಡು ದಿನಗಳಲ್ಲಿ ಸರಿಪಡಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದು ಮೂರು ತಿಂಗಳಾದರೂ ಸರಿಪಡಿಸಿಲ್ಲ ಹಾಗೂ ಬರಿ ಆಶ್ವಾಸನೆಯಾಗಿಯೇ ಉಳಿದಿದೆ.
– ಚಂದ್ರಪ್ಪ, ಪ.ಪಂ. ಮಾಜಿ ಅಧ್ಯಕ್ಷ

Leave a Comment