ಅಪರಾಧ ಸುದ್ದಿ

ಇಬ್ಬರು ಅಂತರ್ ಜಿಲ್ಲಾ ಸರಗಳ್ಳರ ಬಂಧನ ; ಪ್ರಕರಣ ನಡೆದು 6 ಗಂಟೆಯಲ್ಲೇ ಪತ್ತೆ ಮಾಡಿದ ಹೊಸನಗರ ಪೊಲೀಸರು !

ಹೊಸನಗರ : ತಾಲ್ಲೂಕಿನ ಸೊನಲೆ ಗ್ರಾಮದಲ್ಲಿ ಇಬ್ಬರು ಅಂತರ್ ಜಿಲ್ಲಾ ಖದೀಮರು ಇಂದು ಬೆಳಿಗ್ಗೆ 7 ಗಂಟೆಯ ಸಂದರ್ಭದಲ್ಲಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಹರಿದುಕೊಂಡು ಹೋಗಿದ್ದು ಪ್ರಕರಣ ನಡೆದ 6 ಗಂಟೆಯಲ್ಲಿ ಹೊಸನಗರ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಘಟನಾ ವಿವರ :

ಮಂಗಳವಾರ ಬೆಳಿಗ್ಗೆ ಸುಮಾರು 7 ಗಂಟೆಯ ಸಂದರ್ಭದಲ್ಲಿ ಸೊನಲೆ ಗ್ರಾಮದ ಗಾಯಿತ್ರಿ ಕೋಂ ಕುಮಾರ್‌ ಎಂಬುವರ ಮನೆಗೆ ಬಂದ ಖದೀಮರು ಒಂದು ಲೋಟ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಒಳ ನುಗ್ಗಿ ಗಾಯಿತ್ರಿಯವರ ಕೊತ್ತಿಗೆಯಲ್ಲಿದ್ದ ಸುಮಾರು 13 ಗ್ರಾಂ ಚಿನ್ನದ ಸರವನ್ನು ಅಪಹರಿಸಿ ಸಿನಿಮೀಯ ರೀತಿಯಲ್ಲಿ ಬೈಕ್‌ನಲ್ಲಿ ಎಸ್ಕೇಪ್ ಆದ ಘಟನೆ ನಡೆದಿತ್ತು‌.

ತಕ್ಷಣ ಮನೆಯವರು 112ಗೆ ಕರೆ ಮಾಡಿದ್ದಾರೆ.
ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ್‌ರವರ ನೇತೃತ್ವದಲ್ಲಿ ಪತ್ತೆ ಕಾರ್ಯಾಚರಣೆಗೆ ತಂಡ ರಚಿಸಿ ಕಳ್ಳರು ಹೋದ ರಸ್ತೆಯ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಪತ್ತೆ :

ಸೊನಲೆಯಿಂದ ಸುಮಾರು 7 ಕಿ.ಮೀ. ದೂರದಲ್ಲಿ ಕಳ್ಳರು ತಟ್ಟಿಕೇವಿ ಎಂಬ ಗ್ರಾಮದಲ್ಲಿ ನೂತನವಾಗಿ ಕಟ್ಟುತ್ತಿರುವ ಹೊಸ ಮನೆಯೊಂದರಲ್ಲಿ ಇದ್ದು ಇವರನ್ನು ಪತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಉಡುಪಿ ಜಿಲ್ಲೆಯ ಮಹಮದ್ ಗೌಸಿಫ್ (33) ಮತ್ತು ದ.ಕ. ಜಿಲ್ಲೆಯ ರೋಷನ್ (44) ಬಂಧಿತ ಆರೋಪಿಗಳು. ಇವರ ವಿರುದ್ಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಮೆಚ್ಚುಗೆ :

ಸರಗಳ್ಳತನ ಪ್ರಕರಣವನ್ನು ಕೇವಲ ಆರು ಗಂಟೆಯಲ್ಲೇ ಪತ್ತೆ ಮಾಡಿದ ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿಗೆ ಹೊಸನಗರ ತಾಲ್ಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]