ಅಪಘಾತ ತಡೆಯಲು ಪೊಲೀಸ್ ಇಲಾಖೆಯಿಂದ ಟ್ರ್ಯಾಕ್ಟರ್-ಟಿಲ್ಲರ್‌ಗಳಿಗೆ ರಿಪ್ಲೆಕ್ಟರ್ ಸ್ಟಿಕ್ಕರ್ ಅಳವಡಿಕೆ

Written by malnadtimes.com

Published on:

RIPPONPETE ; ಟ್ರ್ಯಾಕ್ಟರ್-ಟಿಲ್ಲರ್‌ಗಳಿಂದ ಸಾಕಷ್ಟು ಅಪಘಾತಗಳಾಗುತ್ತಿದ್ದು ಇದರಿಂದ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪುವುದೇ ಹೆಚ್ಚು. ರಿಪ್ಲೆಕ್ಟರ್ ಸ್ಟಿಕರ್ ಕಾರಣದಿಂದಾಗಿ ಪೊಲೀಸ್ ಇಲಾಖೆ ಜನಜಾಗೃತಿ ಮೂಡಿಸುವ ಮೂಲಕ ಅಪಘಾತವನ್ನು ತಡೆಗಟ್ಟುವ ಉದ್ದೇಶದಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಟ್ರ್ಯಾಕ್ಟರ್ ಟಿಲ್ಲರ್‌ಗಳಿಗೆ ರಿಪ್ಲೆಕ್ಟರ್ ಸ್ಟಿಕ್ಕರ್‌ ಅನ್ನು ಅಳವಡಿಸುವ ಕಾರ್ಯಾಚರಣೆಗೆ ಮುಂದಾಗಿ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಪಿ.ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಕೆಂಚನಾಲ, ಮಾದಾಪುರ, ಆಲವಳ್ಳಿ, ಹೊನ್ನಕೊಪ್ಪ, ಗಾಳಿಬೈಲು ಗ್ರಾಮದಲ್ಲಿ ಸಂಜೆ ತಡವಾಗಿ ಹೊಲ-ಗದ್ದೆಗಳಿಂದ ಮನೆಗೆ ವಾಪಾಸ್ಸಾಗುವ ಟ್ರ್ಯಾಕ್ಟರ್, ಟಿಲ್ಲರ್‌ಗಳು ರಸ್ತೆಯಲ್ಲಿ ಸಂಚರಿಸುವ ಭಾರಿ ವಾಹನಗಳಿಗೆ ಮತ್ತು ದ್ವಿಚಕ್ರನ ವಾಹನ ಚಾಲಕರಿಗೆ ಸಮರ್ಪಕವಾಗಿ ಗೋಚರಿಸದ ಕಾರಣ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಈ ಹಿನ್ನಲೆಯಲ್ಲಿ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಕೈಗೊಂಡು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ ಷರೀಫ್, ಪೊಲೀಸ್ ಠಾಣೆಯ ಎಎಸ್‌ಐ ಮಂಜಪ್ಪ, ಉಮೇಶ್, ಸೋಮಶೇಖರ್, ಗಿರೀಶ್, ಸಂತೋಷ್ ಕುಮಾರ್ ಇತರರು ಹಾಜರಿದ್ದರು.


ಉದ್ಬವ ಬಸವಣ್ಣ ದೇವಸ್ಥಾನದಲ್ಲಿ ಭಕ್ತರಿಂದ ದೀಪೋತ್ಸವ ಸಂಭ್ರಮ

RIPPONPETE ; ಪುರಾಣ ಪ್ರಸಿದ್ದ ಉದ್ಭವ ಕೋಣಂದೂರಿನ ಬಸವಣ್ಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವವು ಸಂಭ್ರಮ ಸಡಗರದೊಂದಿಗೆ ಅದ್ದೂರಿಯಾಗಿ ನೆರವೇರಿತು.

ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ದೀಪೋತ್ಸವದ ಅಂಗವಾಗಿ ಬಸವಣ್ಣ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆ ನೆರವೇರಿತು.

ಈ ಪೂಜಾ ಕಾರ್ಯದಲ್ಲಿ ರಿಪ್ಪನ್‌ಪೇಟೆಯ ಡಿ.ಎಸ್.ಸುವರ್ಣಮ್ಮ, ಡಿ.ಎಂ.ಮೇನಕಮ್ಮ, ನಾಗವೇಣಮ್ಮ ದಾನಪ್ಪಗೌಡ, ಶೀಲಾ ಆರ್.ಡಿ., ವಾಣಿ ಮಧುಸೂದನ್, ಉಷಾ ನಾಗಭೂಷಣ, ಪಲ್ಲವಿ ರವಿಭೂಷಣ, ಶಿಲ್ಪ ಕರ್ಣ, ವಿನೋದ ಕಂಕಳ್ಳಿ, ಇನ್ನಿತರರು ಇದ್ದರು.

Leave a Comment