ಜೋಗ್ ಫಾಲ್ಸ್‌ನಲ್ಲಿ ಆತ್ಮಹ*ತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಮನವೊಲಿಸಿದ ಕಾರ್ಗಲ್ ಠಾಣೆ ಪಿಎಸ್ಐ

Written by Koushik G K

Updated on:

ಸಾಗರ : ಜೋಗ್ ಫಾಲ್ಸ್‌ನಲ್ಲಿ ಆತ್ಮಹತ್ಯೆ ಮಾಡಲು ಬಂದಿದ್ದ ಒಬ್ಬ ವ್ಯಕ್ತಿಯನ್ನು, ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ಅವರ ಜಾಗರೂಕತೆ ಹಾಗೂ ಮನವೊಲಿಸಿದ ಪಾರು ಮಾಡಿರುವ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಾಹಿತಿಯಂತೆ, ಬೆಂಗಳೂರಿನ ನಿವಾಸಿ ಒಬ್ಬ ವ್ಯಕ್ತಿ ತೀವ್ರ ಜಿಗುಪ್ಸೆಯಿಂದ ಜೋಗ್ ಫಾಲ್ಸ್‌ಗೆ ಬಂದು ಆತ್ಮಹತ್ಯೆಗೆ ಮುಂದಾಗಿದ್ದ. ಈ ಬಗ್ಗೆ ಮಾಹಿತಿ ತಿಳಿದ ಕಾರ್ಗಲ್ ಠಾಣೆಯ ಪಿಎಸ್ಐ ಸ್ಥಳಕ್ಕೆ ಧಾವಿಸಿ, ಆ ವ್ಯಕ್ತಿಗೆ ಧೈರ್ಯ ತುಂಬಿ, ಆತ್ಮಹತ್ಯೆ ತೀವ್ರ ಸಮಸ್ಯೆಗೆ ಪರಿಹಾರವಲ್ಲ ಎಂದು ಮನವೊಲಿಸಿದರು.

ಅಲ್ಲದೆ, ಅವರು ಆತನ ಪೋಷಕರನ್ನು ಫೋನ್ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿ, ಮಗ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದರು. ನಂತರ ಸೂಕ್ತ ಕ್ರಮ ಕೈಗೊಂಡು, ಆ ವ್ಯಕ್ತಿಯನ್ನು ವಾಪಸ್ ಬೆಂಗಳೂರಿನ ಅವನ ಮನೆಗೆ ಸುರಕ್ಷಿತವಾಗಿ ಕಳುಹಿಸಲಾಯಿತು.

ಸ್ಥಳೀಯರು ಹಾಗೂ ಸಾರ್ವಜನಿಕರು ಪಿಎಸ್ಐ ಮಾನವೀಯ ಸೇವೆಯನ್ನು ಶ್ಲಾಘಿಸಿದ್ದಾರೆ. ಆತ್ಮಹತ್ಯೆ ತಡೆಗಟ್ಟುವಲ್ಲಿ ಹಾಗೂ ಒಂದು ಕುಟುಂಬವನ್ನು ದುಃಖದಿಂದ ಉಳಿಸುವಲ್ಲಿ ಪೊಲೀಸರ ತ್ವರಿತ ಪ್ರತಿಕ್ರಿಯೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಗಿದೆ.

ಲಿಂಗನಮಕ್ಕಿ ಜಲಾಶಯ: 7 ಗೇಟ್ ತೆರೆದು 15,000 ಕ್ಯೂಸೆಕ್ ನೀರು ನದಿಗೆ ಬಿಡುಗಡೆ : ಮೈದುಂಬಿದ ಜೋಗ ಜಲಪಾತ

Leave a Comment