ಹುಲಿಕಲ್ ಘಾಟ್‌ನಲ್ಲಿ ಡಿಸೇಲ್ ಖಾಲಿಯಾಗಿ ನಿಂತ ಕೆ.ಎಸ್.ಆರ್.ಟಿ.ಸಿ ಬಸ್, ಟ್ರಾಫಿಕ್ ಜಾಮ್

Written by Koushik G K

Published on:

ಹೊಸನಗರ: ಹುಲಿಕಲ್‌ ಘಾಟ್‌ನ ತಿರುವಿನಲ್ಲಿ ಡಿಸೇಲ್‌ ಖಾಲಿಯಾಗಿದ ಕಾರಣ ಕೆಎಸ್‌ಆರ್‌ಟಿಸಿ ಬಸ್‌ ರಸ್ತೆ ಮಧ್ಯದಲ್ಲಿ ನಿಂತುಹೋಗಿ, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ–ಹೊಸನಗರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಘಾಟಿಯ ಮುಖ್ಯ ತಿರುವಿನಲ್ಲಿ ಡಿಸೇಲ್‌ ಖಾಲಿಯಾಗಿ ನಿಂತು ಹೋಗಿದೆ. ಈ ರಸ್ತೆಯು ತೀವ್ರ ತಿರುವು ಮತ್ತು ಕಿರಿದಾದ್ದರಿಂದ, ಬಸ್‌ ನಿಂತ ಕಡೆ ಇತರೆ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು.

ಕಾರುಗಳು ಮತ್ತು ಸಣ್ಣ ಗೂಡ್ಸ್‌ ವಾಹನಗಳು ಮಾತ್ರ ಬಸ್‌ನ ಪಕ್ಕದಿಂದ ಸಾಗಲು ಸಾಧ್ಯವಾಗಿದ್ದು, ದೊಡ್ಡ ವಾಹನಗಳಿಗೆ ತೀವ್ರ ತೊಂದರೆ ಉಂಟಾಯಿತು.

ಡಿಸೇಲ್‌ ವ್ಯವಸ್ಥೆ ಬಳಿಕ ಸಂಚಾರ ಸುಧಾರಣೆ

ಸಮೀಪದ ಮಾಸ್ತಿಕಟ್ಟೆಯಿಂದ ತುರ್ತು ಡಿಸೇಲ್‌ ಪೂರೈಕೆ ಮಾಡಲಾಗಿದ್ದು, ಬಸ್ ಮತ್ತೆ ಹೊರಟಿದೆ. ಬಸ್ ನಿಂತಿದ್ದ ಸಮಯದಲ್ಲಿ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದ್ದರು ಕಡಿಮೆ ಸಮಯದಲ್ಲಿ ಪರಿಹಾರವಾಗಿದ್ದು ಸ್ವಲ್ಪ ನಿಟ್ಟುಸಿರು ಬಿಡುವಂತಾಯಿತು.

Leave a Comment