ಲಿಂಗನಮಕ್ಕಿ ಜಲಾಶಯ: ಕಡಿಮೆಯಾದ ಒಳ ಹರಿವು, ಇಂದು ಹೊರ ಹರಿವು ಎಷ್ಟಿದೆ ?

Written by Koushik G K

Published on:

ಸಾಗರ:ಲಿಂಗನಮಕ್ಕಿ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ, ರೇಡಿಯಲ್‌ ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿರುವ ನೀರಿನ ಪ್ರಮಾಣವೂ ಇಳಿಕೆಯಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪ್ರಸ್ತುತ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಇಳಿಕೆಯಾದ್ದರಿಂದ, ಜಲಾಶಯಕ್ಕೆ 29,784 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಇದಕ್ಕೆ ಅನುಗುಣವಾಗಿ ಒಟ್ಟು 17,150 ಕ್ಯೂಸೆಕ್‌ ಹೊರ ಹರಿವು ಮಾಡಲಾಗುತ್ತಿದೆ. ಅದರಲ್ಲೂ, ಕೇವಲ 10,570 ಕ್ಯೂಸೆಕ್‌ ನೀರನ್ನು ರೇಡಿಯಲ್‌ ಗೇಟ್‌ಗಳ ಮೂಲಕ ಬಿಡುಗಡೆ ಮಾಡಲಾಗಿದೆ.

ಜಲಾಶಯದ ಪ್ರಸ್ತುತ ಮಟ್ಟ

  • ನೀರಿನ ಮಟ್ಟ: 1816.55 ಅಡಿ
  • ಕಳೆದ 24 ಗಂಟೆಯಲ್ಲಿ ಏರಿಕೆ: 0.35 ಅಡಿ

ಮಂಗಳವಾರ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ಸುಮಾರು 15,000 ಕ್ಯೂಸೆಕ್‌ ನೀರನ್ನು ಹೊರಬಿಡಲಾಗಿತ್ತು. ಆದರೆ, ಮಂಗಳವಾರದ ನಂತರ ಮಳೆ ಕೊಂಚ ಇಳಿಕೆಯಾಗಿರುವುದರಿಂದ ಹೊರ ಹರಿವು ಪ್ರಮಾಣ ತಗ್ಗಿಸಲಾಗಿದೆ.

Leave a Comment