ಹೊಸನಗರ : ಧಾರ್ಮಿಕ ಕ್ಷೇತ್ರಗಳ ವಿರುದ್ಧ ದಬ್ಬಾಳಿಕೆ ಶತ-ಶತಮಾನಗಳಿಂದಲ್ಲೂ ನಡೆಯುತ್ತ ಬಂದಿದ್ದು ಹಿಂದುಗಳು ಪೂಜಿಸುವ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಷಡ್ಯಂತ್ರ ಮಾಡುವವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ ಎಂದು ಮಂಗಳೂರಿನ ಪ್ರಖ್ಯಾತ ಅಂಕಣ ಬರಹಗಾರರು ಮತ್ತು ಹಿಂದೂ ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ಹೊಸನಗರದಲ್ಲಿ ಹಿಂದೂ ಮಹಾ ಧರ್ಮಸ್ಥಳ ಭಕ್ತಾಧಿಗಳು ವೇದಿಕೆಯಿಂದ ಕೊಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ಪುಣ್ಯ ಸನ್ನಿಧಿಗೆ ಕಳಂಕ ತಂದಿರುವವರ ವಿರುದ್ಧ ಹೊಸನಗರದ ಗಂಗಾಧರೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಆವರಣದಲ್ಲಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಯಾರೇ ಅಪಪ್ರಚಾರ ಮಾಡಿದರೂ ಧರ್ಮಸ್ಥಳಕ್ಕೆ ವೀರೇಂದ್ರ ಹೆಗ್ಗಡೆಯವರಿಗೆ ಏನೂ ಹಾನಿ ಆಗುವುದಿಲ್ಲ ಆದರೆ ಕ್ಷೇತ್ರದ ಬಗ್ಗೆ ಅವಪ್ರಚಾರ ಮಾಡುವುದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುತ್ತದೆ. ನಮ್ಮವರೇ ನಮ್ಮ ಧಾರ್ಮಿಕ ಕೇಂದ್ರದ ಬಗ್ಗೆ ಅಪಪ್ರಚಾರಕ್ಕೆ ಇಳಿದಿರುವುದು ದುರದುಷ್ಟಕರ ಸಂಗತಿ ನಮ್ಮ ಹಿಂದು ಸಮಾಜವನ್ನು ನಾಶಗೊಳಿಸುವ ಷಡ್ಯಂತ್ರ ನಡೆಯುತ್ತಿದ್ದು ಹಿಂದುಗಳಾದ ನಾವು ಒಗ್ಗಟ್ಟಾಗಿ ಹಿಂದು ಧಾರ್ಮಿಕ ಕೇಂದ್ರಗಳನ್ನು ಉಳಿಸಬೇಕಾಗಿದೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ ಸಭೆಯಲ್ಲಿ ಮಾತನಾಡಿ, ಸರ್ಕಾರಕ್ಕೂ ಪ್ರಕರಣದಲ್ಲಿ ಜಿಜ್ಞಾಸೆ ಇದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮೊದಲು ಎಸ್.ಐ.ಟಿ ರಚನೆ ಬಗ್ಗೆ ಬಹುಮತ ವ್ಯಕ್ತಪಡಿಸಿದರು. ಸಚಿವ ಸಂಪುಟ ಸಭೆಯಲ್ಲಿ ಒಬ್ಬ ಸಚಿವ ವಿರೋಧ ವ್ಯಕ್ತಪಡಿಸಿದರೂ ಎಸ್.ಐ.ಟಿ ರಚನೆಯಾಗುತ್ತಿರಲಿಲ್ಲ. ಆ ಸಚಿವ ಸಂಪುಟ ಸಭೆಯಲ್ಲಿ ಸುಮ್ಮನಿದ್ದ ಡಿ.ಕೆ ಶಿವಕುಮಾರ್ ಈಗ ಧರ್ಮಸ್ಥಳಕ್ಕೆ ಜೈ ಎನ್ನುತ್ತಿರುವುದು ಯಕ್ಷ ಪ್ರಶ್ನೆಯಾಗಿದೆ. ಧರ್ಮಸ್ಥಳದಲ್ಲಿ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸದಾ ಒಗ್ಗಟಾಗಿ ಇರಬೇಕು ಎಂತಹ ಹೋರಾಟಕ್ಕೂ ನಾವು ಬದ್ದರಿದ್ದೇವೆ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರನ್ನು ನಡೆದಾಡುವ ದೇವರು ಎಂದು ಸಮಸ್ತ ಹಿಂದೂ ಬಾಂಧವರು ನಂಬಿಕೊಂಡು ಬಂದಿದ್ದಾರೆ. ಧರ್ಮಸ್ಥಳದಲ್ಲಿರುವ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ ಸತ್ಯಕ್ಕೆ ಹೆಸರಿರುವ ದೇವರುಗಳು. ಈ ದೇವರುಗಳ ಬಗ್ಗೆ ಅಂತಹ ಪವಿತ್ರ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಸರ್ಕಾರ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನದಲ್ಲಿ ನಮ್ಮ ಸರ್ಕಾರದಿಂದ ಹಂತ-ಹಂತವಾಗಿ ಷಡ್ಯಂತ್ರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಹಾಗೂ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಹೆಸರಿಗೆ ಕಳಂಕ ತರುತ್ತಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ಹಿಂದಿರುವ ಶಕ್ತಿಗಳ ವಿರುದ್ಧ ಧರ್ಮಸ್ಥಳದಲ್ಲಿ ತೆಗೆದಿರುವ 17 ಗುಂಡಿಗಳಲ್ಲಿ ಗುಂಡಿಗೆ ಹಾಕಿ ಮುಚ್ಚಿ ಮತ್ತು ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಕಕ್ಷ ಚಂದ್ರಮೌಳಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರ ಹಿಂದುಗಳಿಗೆ ಪವಿತ್ರ ಕ್ಷೇತ್ರ ನಾವು ಮನೆಯಲ್ಲಿ ಮಡಿಕೆಯಲ್ಲಿ ಹಣ ಸೇರಿಸಿ ದೇವಸ್ಥಾನದ ಹುಂಡಿಗೆ ಹಾಕುತ್ತಿದ್ದೇವೆ. ಪ್ರತಿ ವರ್ಷ ಧರ್ಮಸ್ಥಳ ಕ್ಷೇತ್ರಕ್ಕೆ ಹೋಗಿ ಹರಕೆ ತೀರಿಸಿ ಬರುತ್ತಿದ್ದೇವೆ ಇದು ತಲ-ತಲಾಂತರದಿಂದಲ್ಲೂ ಹಿಂದುಗಳಿಗೆ ಪವಿತ್ರ ಕ್ಷೇತ್ರವಾಗಿದ್ದು ಇಂತಹ ಪವಿತ್ರ ಸ್ಥಳವನ್ನು ಆ ಪವಿತ್ರಗೊಳಿಸಿರುವುದು ಮನಸ್ಸಿಗೆ ಘಾಸಿಯಾಗಿದೆ. ಯಾವುದೇ ಭಾರತ ದೇಶದ ಪ್ರತಿಯೊಬ್ಬ ಹಿಂದುಗಳು ಹಿಂದುಗಳ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆಯಾದರೆ ಎಲ್ಲ ಹಿಂದುಗಳು ಎದ್ದು ನಿಂತು ಪ್ರತಿಭಟಿಸಬೇಕು. ನಮ್ಮ ಧಾರ್ಮಿಕ ಭಾವನೆಗಳನ್ನು ಉಳಿಸಿಕೊಳ್ಳಬೇಕು ಧರ್ಮ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆಯಾದಾಗ ಎಲ್ಲರು ಪಕ್ಷಭೇದ ಮರೆದು ಒಂದಾಗಿ ಹೋರಾಟ ಅನಿವಾರ್ಯ ಎಂದರು.
ಶ್ರೀ ಕ್ಷೇತ್ರದ ವಿರುದ್ಧದ ಅಪಪ್ರಚಾರಕ್ಕೆ ಎಲ್ಲ ಪಕ್ಷದ ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ಆಕ್ರೋಶ ವ್ಯಕ್ತಪಡೆಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎನ್.ಆರ್ ದೇವಾನಂದ್, ಜೆಡಿಎಸ್ ತಾಲೂಕು ಅಧ್ಯಕ್ಷ ವರ್ತೇಶ್, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಸುಧೀಂದ್ರ ಪಂಡಿತ್, ಮೋಹನ್ ಶೆಟ್ಟಿ, ನಾರಾಯಣ ಕಾಮತ್, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಕೃಷ್ಣವೇಣಿ, ಹಾಲಗದ್ದೆ ಉಮೇಶ್, ಎನ್ ಶ್ರೀಧರ ಉಡುಪ, ನೇತ್ರಾ ಸುಬ್ರಾಯಭಟ್, ಎನ್ ಗಣೇಶ್, ಪ್ರವೀಣ್, ಸುರೇಶ ಸ್ವಾಮಿರಾವ್, ಆಲವಳ್ಳಿ ವೀರೇಶ್, ದೇವರಾಜ್, ಮಂಡಾನಿ ಮೋಹನ್, ಈಶ್ವರಪ್ಪ ಗೌಡ, ಮಿಲ್ ಈಶ್ವರಪ್ಪ ಗೌಡ, ಹೆಚ್ ಮಹಾಬಲ, ಗೌತಮ್ ಮುರುಳಿಧರ ಹತ್ವಾರ್, ಗೌತಮ್, ಕಟ್ಟೆ ಸುರೇಶ, ರಾಮಚಂದ್ರ ಹೆಗ್ಗಡೆ, ಸದಾಶಿವ ಶ್ರೇಷ್ಠಿ, ಎರಗಿ ಉಮೇಶ್, ಬಿ.ಜಿ ನಾಗರಾಜ್, ಎಂ.ಪಿ ಸುರೇಶ್, ಉಮೇಶ್ ಕಂಚುಗಾರ್, ಗಣಪತಿ ಪಂಡಿತ್, ಆರ್.ಟಿ ಗೋಪಾಲ್, ಸುಮತಿ ಪೂಜಾರಿ, ಆಟೋ ಚಾಲಕರ ಸಂಘದ ಸದಸ್ಯರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.