ಶಿವಮೊಗ್ಗ: ಉಳ್ಳೂರಲ್ಲಿ KSRTC ಬಸ್ ನಿಲ್ಲಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ

Written by Koushik G K

Published on:

ಶಿವಮೊಗ್ಗ:ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ಸುಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶಾಸಕನಿಂದ ಸೂಚನೆ

📢 Stay Updated! Join our WhatsApp Channel Now →

ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿರುವ ಶಾಸಕ ಗೋಪಾಲಕೃಷ್ಣ ಬೇಳೂರು, ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 700–800 ಕುಟುಂಬಗಳು ವಾಸವಾಗಿದ್ದು, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಈ ಪ್ರದೇಶದ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಹಾಗೂ ವೃದ್ಧರು ನಗರಗಳಿಗೆ ತೆರಳಲು KSRTC ಬಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಸಾಗರ–ಶಿವಮೊಗ್ಗ ಮಾರ್ಗದ ಸರ್ಕಾರಿ ಬಸ್ಸುಗಳನ್ನು ಉಳ್ಳೂರಲ್ಲಿ ನಿಲ್ಲಿಸುವಂತೆ ಅವರು ಸೂಚನೆ ನೀಡಿದ್ದಾರೆ. ಇದೀಗ ಸ್ಥಳೀಯರ ಅನುಕೂಲಕ್ಕಾಗಿ ಉಳ್ಳೂರಲ್ಲಿ KSRTC ಬಸ್ ನಿಲ್ದಾಣ ಫಲಕ (ಬೋರ್ಡ್) ಕೂಡ ಅಳವಡಿಸಲಾಗಿದೆ.

ಜನರ ಮನವಿ – ಸುದ್ದಿ ಪ್ರಭಾವ

ಸೆಪ್ಟೆಂಬರ್ 18ರಂದು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ ಮನವಿ ಮಾಡಿದ್ದು, ಕನ್ನಡ ನ್ಯೂಸ್ ನೌ ಸುದ್ದಿ ಪ್ರಕಟಿಸಿತ್ತು. ಆಗ ಸ್ಥಳೀಯರು ತಮ್ಮ ಬೇಡಿಕೆಯನ್ನು ಹೀಗಾಗಿ ಮನವರಿಕೆ ಮಾಡಿದ್ದರು:

  • ಬಸ್‌ಗಳು ಉಳ್ಳೂರು ಬಿಟ್ಟು ಸಿಗಂಧೂರೇಶ್ವರಿ ಕಾಲೇಜ್ ಬಳಿ ಮಾತ್ರ ನಿಲ್ಲಿಸುತ್ತಿವೆ.
  • ವೃದ್ಧರು, ಗರ್ಭಿಣಿಯರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಕಾಲೇಜು ವರೆಗೆ ನಡೆದು ಹೋಗುವುದು ಕಷ್ಟವಾಗಿದೆ.
  • ಉಳ್ಳೂರು ಬಿ.ಎಸ್.ಎನ್.ಎಲ್. ಕಚೇರಿ ಮುಂಭಾಗದಲ್ಲಿ ಬಸ್ ನಿಲ್ಲಿಸಿದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲ.

ಈ ಸುದ್ದಿಯನ್ನು ಗಮನಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ತಕ್ಷಣ ಕ್ರಮ ಕೈಗೊಂಡಿದ್ದು, ಇಂದು KSRTC ಬಸ್‌ಗಳು ಉಳ್ಳೂರಲ್ಲಿ ನಿಲ್ಲಿಸಲು ಪ್ರಾರಂಭಿಸಿವೆ.

ಜನತೆಗೆ ಅನುಕೂಲ

ಈ ನಿರ್ಧಾರದಿಂದ ವಿದ್ಯಾರ್ಥಿಗಳು, ರೈತರು, ವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ತೊಂದರೆ ಇಲ್ಲದೆ ನಗರ ಪ್ರದೇಶಗಳಿಗೆ ಸಂಚಾರ ಮಾಡಿಕೊಳ್ಳಲು ಅನುಕೂಲವಾಗುತ್ತಿದೆ. ಸ್ಥಳೀಯರು ಶಾಸಕನ ತಕ್ಷಣದ ಕ್ರಮವನ್ನು ಶ್ಲಾಘಿಸಿದ್ದಾರೆ.

ಸಂದೇಶ ನೀಡುವ ರಚನಾತ್ಮಕ ಚಲನಚಿತ್ರಗಳು ಮೂಡಿಬರಲಿ: ಮಧು ಬಂಗಾರಪ್ಪ

Leave a Comment