ಹೊಸನಗರ: ಪಟ್ಟಣ ಪಂಚಾಯತಿ ವ್ಯಾಪ್ತಿಯ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸುವುದು ತಮ್ಮ ಆದ್ಯ ಕರ್ತವ್ಯ ಆಗಿದ್ದು, ಈ ಹಿನ್ನಲೆಯಲ್ಲಿ ರೂ 8 ಕೋಟಿ ಅನುದಾನ ಬಿಡುಗಡೆ ಆಗಿದ್ದು ಟೆಂಡರ್ ಕಾರ್ಯ ಮುಗಿದ ಬಳಿಕ ಮಿನಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಮಳೆಗಾಲದ ಕಾರಣ ಮಣ್ಣು ಮಿಶ್ರಿತ ಕಣಕಲು ನೀರು ಸರಬರಾಜು ಆಗುತ್ತಿದ್ದೆ. ಇದು ಜನರ ಆರೋಗ್ಯದ. ಮೇಲೆ ದುಷ್ಪರಿಣಾಮ ಬೀರುವ ಹೆಚ್ಚಿದೆ. ತಕ್ಷಣ ಶುದ್ದ ಕುಡಿಯುವ ನೀರು ಸರಬರಾಜಿಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂಬ ಸದಸ್ಯ ನಿತ್ಯಾನಂದ ಅವರ ದೂರಿಗೆ, ಈ ಕುರಿತು ಸಾರ್ವಜನಿಕ ದೂರ ಬಾರದಂತೆ ಕ್ರಮಕೈಗೊಳ್ಳಿ ಎಂದು ಸಿಬ್ಬಂದಿಗಳಿಗೆ ಶಾಸಕ ಬೇಳೂರು ತಾಕೀತು ಮಾಡಿದರು.
ಈ ಹಿಂದೆ ನಾನು ಕ್ಷೇತ್ರದ ಶಾಸಕ ಆಗಿದ್ದಾಗ ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಸರಬರಾಜಿಗೆ ಪಟ್ಟಣದ ಸಮೀಪದಲ್ಲಿ ರೂ 26 ಕೋಟಿ ಅನುದಾನದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಪ್ರಸ್ಥಾವನೆ ಸಲ್ಲಿಸಿದ್ದೆ. ಆದರೆ, ರಾಜಕೀಯ ಸ್ಥಿತ್ಯಂತರದಲ್ಲಿ ಅದು ಸಾಧ್ಯವಾಗಲಿಲ್ಲ. 2023ರಲ್ಲಿ ನಾನು ಮತ್ತೆ ಶಾಸಕನಾದ ಬಳಿಕ ಕುಡಿಯುವ ನೀರು ಯೋಜನೆ ಜಾರಿಗೆ ಕಟ್ಟಿಬದ್ದನಾಗಿದ್ಧೇನೆ. ಸಾಗರ ಪಟ್ಟಣಕ್ಕೆ ಈಗಾಗಲೇ ರೂ245 ಕೋಟಿ ವೆಚ್ಚದಲ್ಲಿ ಶಾಶ್ವತ ಶುದ್ದ ಕುಡಿಯುವ ನೀರು ಯೋಜನೆ ಲೋಕಾರ್ಪಣೆ ಮಾಡಿದ್ದೇನೆ. ಶರಾವತಿ ಯೋಜನೆ ಸಂತ್ರಸ್ತರೇ ಹೆಚ್ಚಿರುವ ಹೊಸನಗರ ಭಾಗಕ್ಕೂ ಶುದ್ದ ಕುಡಿಯುವ ನೀರು ಒದಗಿರುವುದು ನನ್ನ ಆದ್ಯ ಕರ್ತವ್ಯ ಎಂದರು.
ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣವನ್ನು ನವೀಕರಿಸುವ ಕಾರ್ಯ ಆಗಲಿದೆ. ಶೌಚಾಲಯ, ಕುಡಿಯುವ ನೀರು, ಟಿ.ವಿ. ಮೇಲ್ಚಾವಣಿ ದುರಸ್ತಿ, ದೂರದೂರಿನ ಪ್ರಯಾಣಿಕರಿಗೆ ತಂಗಲು ಅಗತ್ಯ ಲಾಡ್ಜ್ ವ್ಯವಸ್ಥೆ ಕಲ್ಪಿಸಲು ಅಗತ್ಯ ಅನುದಾನ ಬಿಡುಗಡೆ ಆಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ.
ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ರೂ 15 ಅನುದಾನದಲ್ಲಿ ನಿರ್ಮಿಸಲು ಉದ್ದೇಶಿತ ಶೌಚಾಲಯ ಕಟ್ಟಡವನ್ನು ಪಕ್ಕದ ನೆಹರು ಕ್ರೀಡಾಂಗಣಕ್ಕೆ ವರ್ಗಾಯಿಸಲಾಗುತ್ತದೆ. ಇಲ್ಲಿ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ರೂ.5 ಲಕ್ಷ ಹಣದಲ್ಲಿ ಅಗತ್ಯ ಶೌಚಾಲಯ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ.
ತಮ್ಮ ಶಾಸಕ ಅವಧಿ ಮುಕ್ತಾಯ ಆಗುವುದರಲ್ಲಿ ಹೊಸನಗರ ಪಟ್ಟಣದ ಪ್ರಮುಖ ರಸ್ತೆಗಳ ಅಗಲೀಕರಣ ಹಾಗು ಶೀಘ್ರದಲ್ಲೇ ಹಲವು ಆಶ್ರಯ ಲೇಔಟ್ ಸೇರಿದಂತೆ ಅಗತ್ಯ ಇರುವ ರಸ್ತೆಗಳ ಡಾಂಬರೀಕರಣಕ್ಕೆ ,ಚಾಲನೆ ನೀಡಲು ಬದ್ದನಿದ್ದೇನೆ ಎಂದರು,ಬೀದಿ ದೀಪ ನಿರ್ವಹಣೆಯಲ್ಲಿ ಜನರಿಂದ ದೂರು ಬಂದರೆ ತಾವು ಸುಮ್ಮನಿರಲು ಸಾಧ್ಯವಿಲ್ಲ.ಸಾರ್ವಜನಿಕರ ಮೂಲಭೂತ ಸೌಕರ್ಯ ನೀಡಲು ಸ್ಥಳೀಯ ಆಡಳಿತ ಸಕಾಲ ಸಿದ್ದರಿರಬೇಕು ಎಂದರು.
ಸಭೆಯಲ್ಲಿ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಿಕಾ, ಸದಸ್ಯರಾದ ಗುರುರಾಜ್, ಶಾಹೀನಾ, ನೇತ್ರಭಟ್, ಗುರುರಾಜ ಕೆ.ಎಸ್. ಕುಡಿಯುವ ನೀರು ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕ, ಜಿಲ್ಲಾ ಯೋಜನಾಧಿಕಾರಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್ ಸೇರಿದಂತೆ ಹಲವರು ಹಾಜರಿದ್ದರು.
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.