UPI Payments :ರಾಷ್ಟ್ರೀಯ ಪಾವತಿ ನಿಗಮ ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಅಂದರೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ವಹಿವಾಟುಗಳಿಗೆ ಹೊಸ ನಿಯಮಗಳು ಅನ್ವಯಿಸುತ್ತದೆ. ಈ ನಿಯಮಗಳು ಡಿಜಿಟಲ್ ಪಾವತಿಗಳನ್ನು ವಿಶ್ವಾಸಾರ್ಹವಾಗಿ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳುವುದೇ ಇದರ ಉದ್ದೇಶವಾಗಿದೆ. ಈ ನಿಯಮಗಳು ಜೂನ್ 30 ರಿಂದ 2025ರಿಂದ ಜಾರಿಯಾಗಲಿದೆ.ಯಾವ ರೀತಿ ಬದಲಾವಣೆಯಾಗಿದೆ ಅಂದರೆ ನಾವು ನಮ್ಮ ಸಂಪರ್ಕದಲ್ಲಿ ಉಳಿಸಿದ ಹೆಸರನ್ನು ಮಾತ್ರ ನೋಡುತ್ತಿದ್ದೆವು ಆದರೆ ಹೊಸ ನಿಯಮದ ಪ್ರಕಾರ ಹಣವನ್ನು ಯಾರು ಪಡೆಯುತ್ತಾರೋ ಅವರ ಬ್ಯಾಂಕ್ ನೊಂದಣಿಯಲ್ಲಿ ಇರುವ ನಿಜವಾದ ಹೆಸರು ಮಾತ್ರ ಅಪ್ಲಿಕೇಶನ್‌ನಲ್ಲಿ ಕಾಣಿಸುತ್ತದೆ. ಇದು ಮೋಸ ವಂಚನೆಗಳಿಂದ ರಕ್ಷಿಸುತ್ತದೆ.ಈ ನಿಯಮದಿಂದ ಆಗುವ ಅನುಕೂಲಗಳು ಯಾವುವು ಎಂದರೆ

1.ವಂಚನೆ ತಪ್ಪಿಸುತ್ತದೆ: ಹಣ ಕಳುಹಿಸುವ ಮೊದಲು ಯಾವ ವ್ಯಕ್ತಿಗೆ ಹಣವನ್ನು ಸಂದಾಯ ಮಾಡಬೇಕಾಗಿರುವ ಅದೇ ವ್ಯಕ್ತಿಯನ್ನು ಕಂಡುಹಿಡಿಯಲು ಸಹಾಯವಾಗುತ್ತದೆ.
2.ವಹಿವಾಟುಗಳಲ್ಲಿ ಮೋಸವಾಗುವುದಿಲ್ಲ: ಒಂದೇ ರೀತಿಯ ಹೆಸರನ್ನು ಹೊಂದಿರುವವರು ಇದ್ದಾಗ ಗೊಂದಲಗಳಾಗುವುದು ತಪ್ಪುತ್ತದೆ.
3.ಸುರಕ್ಷತೆಯನ್ನು ಕಾಯ್ದುಕೊಳ್ಳಬಹುದು: ಬಳಕೆದಾರರು ಸರಿಯಾದ ವ್ಯಕ್ತಿಗೆ ಹಣವನ್ನು ಸಂದಾಯ ಮಾಡುತ್ತಾನೆ ಮತ್ತು ಬಳಕೆದಾರರಲ್ಲಿ ನಂಬಿಕೆ ಮತ್ತು ವಿಶ್ವಾಸ ಹೆಚ್ಚುತ್ತದೆ.
ಈ ನಿಯಮವು ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಹಣ ಕಳುಹಿಸುವಾಗ ಅನ್ವಯಿಸುತ್ತದೆ ಮತ್ತು ವ್ಯಕ್ತಿ ಅಂಗಡಿ, ಕೆಫೇ ಅಥವಾ ವ್ಯಾಪಾರಿಗೆ ಪಾವತಿ ಮಾಡುವಾಗ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಈ ನಿಯಮವು ಅನ್ವಯಿಸುತ್ತದೆ. ಮೊಬೈಲ್ ನಂಬರ್ ಅನ್ನು ಹಾಕಿದಾಗ ಅಥವಾ ಯುಪಿಐ ಐಡಿ ಉಪಯೋಗಿಸಿದಾಗ ನಿಜವಾದ ಹೆಸರು ಗೋಚರಿಸುತ್ತದೆ. ಬಳಕೆದಾರರು ಮೊದಲು ಪರಿಶೀಲಿಸಲಾದ ಹೆಸರನ್ನು ಎಚ್ಚರಿಕೆಯಿಂದ ಓದಬೇಕು. ಹೆಸರಲ್ಲಿ ಅನುಮಾನ ಅಥವಾ ಅಪರಿಚಿತವೆಂದೆನಿಸಿದರೆ ಪಾವತಿ ಮಾಡಬೇಡಿ ಮತ್ತು ಯಾವುದೇ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಾಗ ಹೆಸರಿನಲ್ಲಿ ತಪ್ಪು ಇದೆ ಎಂದು ಅನುಮಾನ ಮೂಡಿದರೆ ತಕ್ಷಣ ನಿಮ್ಮ ಪಾವತಿ ಅಪ್ಲಿಕೇಶನ್ ಹೆಲ್ಫ್ಲೈನ್ ಗೆ ವರದಿ ಮಾಡಿ ಮತ್ತು ನಿಮ್ಮ ಬ್ಯಾಂಕ್ ಗೆ ವರದಿ ಮಾಡಿ. ಈ ರೀತಿಯ ಹೊಸ ನಿಯಮಗಳಿಂದ ಬಳಕೆದಾರರು ಸುರಕ್ಷಿತವಾಗಿ ಮತ್ತು ನಿರ್ಭಯವಾಗಿ ಬಳಸಲು ಸಹಾಯವಾಗುತ್ತದೆ. ಬಳಕೆದಾರರು ಎಚ್ಚರಿಕೆಯಿಂದ ಬಳಸಿದ್ದೇ ಆದರೇ ವಂಚನೆಗಳಿಂದ ದೂರವಿರಬಹುದು.
Read More
ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
ಹೊಸನಗರ ; ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 18 ಸೆಂ.ಮೀ. ಮಳೆ
Author Profile
-
ಅವರು MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.
Latest entries
AgricultureMay 28, 2025ರೈತರಿಗೆ ಮಿನಿ ಟ್ರ್ಯಾಕ್ಟರ್, ಪಾಲಿಹೌಸ್, ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಆಹ್ವಾನ!
AgricultureMay 28, 2025ರೈತರಿಗೋಸ್ಕರ ಬರೋಬ್ಬರಿ ಶೇ 90ರಷ್ಟು ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ!ಇಂದೇ ಅಪ್ಲೈ ಮಾಡಿ
NewsMay 28, 2025ಶಿವಮೊಗ್ಗ- ಮೈಸೂರು ಎಕ್ಸ್ಪ್ರೆಸ್ ರೈಲಿನ ಲೇಟೆಸ್ಟ್ ಅಪ್ಡೇಟ್ !
Shivamogga NewsMay 27, 2025ವಿಐಎಸ್ಎಲ್ ಕಾರ್ಖಾನೆಗೆ ಕಾಯಕಲ್ಪ; ಕೈಗಾರಿಕಾ ಸಚಿವ ಕುಮಾರಸ್ವಾಮಿ ಹೇಳಿಕೆ ಬಿವೈಅರ್ ಮೆಚ್ಚುಗೆ