ಹೊಸನಗರ ; ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಷ್ಟಾವಂತ ಶುಶ್ರೂಷಾಧಿಕಾರಿಯಾಗಿ ಕಳೆದ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶೈಲಜಾರಿಗೆ ಸರ್ಕಾರ ಅತ್ಯುತ್ತಮ ಗೌರವಗಳಲ್ಲಿ ಒಂದಾಗಿರುವ ಸರ್ಕಾರ ನೀಡುವ 2023ನೇ ಸಾಲಿನ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರಿಗೆ 2010ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಶಿವಮೊಗ್ಗ ಇವರಿಂದ ಅತ್ಯುತ್ತಮ ಶುಶ್ರೂಷಕಿ ಪ್ರಶಸ್ತಿ 2016ರಲ್ಲಿ ಎಸ್‌ಐಎಂಎಸ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಹಾಗೂ ಶುಶ್ರೂಷಕರ ಸಂಘ ಶಿವಮೊಗ್ಗರವರಿಂದ ಉತ್ತಮ ಸೇವೆಗಾಗಿ ಅಭಿನಂದನ ಪ್ರಶಸ್ತಿ, 2020ರಲ್ಲಿ ದಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದಿ ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ಇವರಿಂದ ನ್ಯಾಶನಲ್ ಫ್ಲಾರೆನ್ಸ್ ನೈಟಿಂಗೇಲ್ ನರ್ಸ್ ಪ್ರಶಸ್ತಿ, 2024ರಂದು ಬದ್ರಿಯಾ ಜಮ್ಮಾ ಮಸೀದಿಯವರಿಂದ ಗೌರವ ಸನ್ಮಾನ 2024 ಅಕ್ಟೋಬರ್ 1ರಂದು ತಾಲ್ಲೂಕು ನಿವೃತ್ತಿ ಸಂಘದಿಂದ ಗೌರವ ಸನ್ಮಾನ ಪಡೆದಿದ್ದು ಏಪ್ರಿಲ್ 20ರಂದು ರಾಜ್ಯ ಸರ್ಕಾರ 2023ನೇ ಸಾಲಿನ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಿದೆ.

ಅಭಿನಂದನೆ:
ಇವರು ಇಷ್ಟು ವರ್ಷಗಳ ಸೇವೆಯನ್ನು ಪರಿಗಣಿಸಿ ಸರ್ಕಾರ ಇವರಿಗೆ 2023ನೇ ಸಾಲಿನ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ಹೊಸನಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್, ಆಡಳಿತ ವೈದ್ಯಾಧಿಕಾರಿ ಡಾ. ಗುರುಮೂರ್ತಿ, ಹಿರಿಯ ವೈದ್ಯಾಧಿಕಾರಿಯಾದ ಡಾ. ಲಿಂಗರಾಜ್, ಡಾ. ಹೇಮಾಂತ್, ಡಾ. ಶಾಂತರಾಜ್, ಡಾ. ಆತ್ಮ, ಡಾ. ಸಂಶಾದ್ ಬೇಗಮ್, ಡಾ. ಶಿವಯೋಗಪ್ಪ, ಡಾ. ದಿನೇಶ್ ಹಾಗೂ ಹೊಸನಗರ ಸಾರ್ವಜನಿಕ ಆಸ್ಪತ್ರೆ ಎಲ್ಲ ಶುಶ್ರೂಷಕರು, ಆಡಳಿತ ಹಾಗೂ ಎಲ್ಲ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.