ರಿಪ್ಪನ್‌ಪೇಟೆ ; ಇಲ್ಲಿನ ಬಸ್ ತಂಗುದಾಣದಲ್ಲಿ ಎಚ್ಚರವಿಲ್ಲದೆ ಮಲಗಿದ್ದ ಭದ್ರಾವತಿಯ ಕೈಮರ ನಿವಾಸಿ ಸುಂದರೇಶ ಎಂಬುವರ ಕೊರಳಿನಲ್ಲಿದ್ದ ಸುಮಾರು 15 ಗ್ರಾಂ ತೂಕದ ಚಿನ್ನದ ಸರ ಕಳಚಿ ಕೆಳಗೆ ಉದುರಿ ಬಿದ್ದಿರುವುದನ್ನು ಕಂಡು ತಕ್ಷಣ ಆತನ ಸ್ಥಿತಿಯನ್ನು ನೋಡಿ ಉದುರಿ ಬಿದ್ದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ಕೆದಲುಗುಡ್ಡೆ ನಿವಾಸಿ ಪರಶುರಾಮ ಎಂಬುವರು ತಲುಪಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹೌದು, ಸಮೀಪದ ಕೋಡೂರು ಸಮೀಪದ ಶಾಂತಪುರದ ಮಾನವ ಮನೆಗೆ ಬಂದಿದ್ದ ಭದ್ರಾವತಿ ಕೈಮರದ ನಿವಾಸಿ ಸುಂದರೇಶ ಎಂಬುವನ್ನು ರಿಪ್ಪನ್‌ಪೇಟೆಯ ಬಸ್ ತಂಗುದಾಣದ ಕಟ್ಟೆಯಲ್ಲಿ ಎಚ್ಚರ ತಪ್ಪಿ ಮಲಗಿದ್ದು ಆತನ ಕೊರಳಿನಿಂದ ಸುಮಾರು 1.50 ಲಕ್ಷ ರೂ. ಮೌಲ್ಯದ 15 ಗ್ರಾಂ ತೂಕದ ಬಂಗಾರದ ಸರ ಕಳಚಿ ಕೆಳಗಿ ಬಿದ್ದಿದ್ದನ್ನು ಗಮಸಿದ ಪ್ರಯಾಣಿಕ ಕೆದಲುಗುಡ್ಡೆ ಪರಶುರಾಮ ಕೆಳಗೆ ಬಿದ್ದ ಸರವನ್ನು ಎತ್ತಿಕೊಂಡು ಆತನನ್ನು ಎಚ್ಚರಿಸಲು ನೋಡಿದರೆ ಪರಿವೇ ಇಲ್ಲದೆ ಇರುವುದನ್ನು ಗಮನಿಸಿ ತಕ್ಷಣ ಪೊಲೀಸ್ ಠಾಣೆಗೆ ತೆರಳಿ ಸಿಕ್ಕ ಲಕ್ಷಾಂತರ ರೂ. ಬೆಲೆ ಬಾಳುವ ಬಂಗಾರದ ಸರವನ್ನು ಠಾಣಾಧಿಕಾರಿಗಳಿಗೆ ನಡೆದ ಘಟನೆ ವಿಚಾರವನ್ನು ತಿಳಿಸಿ ಆತನ ಕಡೆಯವರನ್ನು ಪತ್ತೆ ಮಾಡಿ ವಾಪಾಸ್ ಕೊಡುವಂತೆ ತಿಳಿಸಿದ್ದಾರೆ.
ರಿಪ್ಪನ್‌ಪೇಟೆ ಠಾಣೆ ಪಿಎಸ್‌ಐ ಪ್ರವೀಣ್ ಕಾರ್ಯಾಚರಣೆ ನಡೆಸಿ ಸಿಕ್ಕ ಬಂಗಾರದ ಸರವನ್ನು ವಾರಸುದಾರನ ಸಂಬಂಧಿಕರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಕೆರೆಹಳ್ಳಿ ರವೀಂದ್ರ, ಕೆದಲುಗುಡ್ಡೆಯ ನಿವಾಸಿ ಗ್ರಾಮ ಪಂಚಾಯ್ತಿ ಸದಸ್ಯ ದಿವಾಕರ, ಪರಶುರಾಮ ಹಾಗೂ ಸುಂದರೇಶ ಸಂಬಂಧಿಕರು ಹಾಜರಿದ್ದರು.