Karnataka Rain : ಕರಾವಳಿ–ಮಲೆನಾಡು ಭಾಗದಲ್ಲಿ ಭಾರಿ ಮಳೆಯ ಎಚ್ಚರಿಕೆ !

Written by Koushik G K

Published on:

Karnataka Rain:ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ಪ್ರಕೃತಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಪ್ರಕಟಿಸಿರುವ ತಾಜಾ ಮುನ್ಸೂಚನೆಯ ಪ್ರಕಾರ, ಮುಂದಿನ 7 ದಿನಗಳವರೆಗೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜೋರಾದ ಗಾಳಿಯೊಂದಿಗೆ ಚದುರಿದಿಂದ ವ್ಯಾಪಕವಾಗಿ ಹಗುರದಿಂದ ಭಾರಿ ಮಳೆಯ ಸಾಧ್ಯತೆ ಇದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದು ಮತ್ತು ನಾಳೆ (ಗುರುವಾರ ಮತ್ತು ಶುಕ್ರವಾರ) ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಅತಿ ಭಾರಿ ಮಳೆಯ ಸಾಧ್ಯತೆ. ಅಲ್ಲದೆ, ಈ ಭಾಗಗಳಿಗೆ ಹೊಂದಿಕೊಂಡಿರುವ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಹೀಗಾಗಿ, ಸಾರ್ವಜನಿಕರು, ರೈತರು, ಪ್ರವಾಸಿಗರು ಮತ್ತು ಮೀನುಗಾರರು ಮುನ್ನೆಚ್ಚರಿಕೆ ವಹಿಸಲು KSNDMC ಹಾಗೂ IMD ಸೂಚನೆ ನೀಡಿವೆ.

ಮುನ್ನೆಚ್ಚರಿಕೆ:

  • ಕಡಲ ತೀರ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಿ, ಅಗತ್ಯವಿದ್ದರೆ ಸ್ಥಳಾಂತರವಾಗಿ .
  • ಗುಡ್ಡ ಪ್ರದೇಶಗಳಲ್ಲಿ ನೆರೆ/ಗುಡ್ಡ ಕುಸಿತದ ಸಾಧ್ಯತೆ ಇರುವ ಕಾರಣದಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಲಿ.
  • ಪ್ರವಾಸ, ಬೆಟ್ಟಾರೋಹಣ ಅಥವಾ ನದಿತೀರದ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಕೈ ಬಿಡಿ .
  • ಸಂಬಂಧಿತ ಇಲಾಖೆ ಸೂಚನೆ ಪಾಲಿಸಿ.

Read More :ಮನೆ ಕಟ್ಟುವವರಿಗೆ ಬಿಗ್ ಶಾಕ್ ! ಈ ನಿಯಮ ಪಾಲಿಸದಿದ್ದರೆ ನೀರು ಹಾಗೂ ವಿದ್ಯುತ್‌ ಸಂಪರ್ಕ ಕಡಿತ !

Leave a Comment