ಶಿವಮೊಗ್ಗ / ಚಿಕ್ಕಮಗಳೂರು ; ರಾಜ್ಯದಲ್ಲಿ ಮುಂಗಾರು ಮಳೆಯು ಮತ್ತಷ್ಟು ತೀವ್ರಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ 5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದೆ. ಭಾರಿ ಮಳೆಯಿಂದ ಪ್ರವಾಹದಂತಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳ ಜನರು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ರೆಡ್ ಅಲರ್ಟ್ ಘೋಷಣೆಯಾಗಿರುವ ಜಿಲ್ಲೆಗಳು:
ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್:
ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಧಾರವಾಡ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ.

ಇನ್ನೂ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೆರಡು ದಿನಗಳಿಂದ ಬಿಟ್ಟು ಬಿಡದೆ ಭಾರಿ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬೇಗಾರಿನಲ್ಲಿ ರಾಜ್ಯದಲ್ಲೇ ಅತ್ಯಧಿಕ 204.5 ಮಿ.ಮೀ. ಮಳೆ ಸುರಿದೆ.
ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ಸುರಿದ ಮಳೆ ವಿವರ ಹೀಗಿದೆ.
ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :
- ತೀರ್ಥಹಳ್ಳಿ – ಅರೇಹಳ್ಳಿ : 133.5
- ತೀರ್ಥಹಳ್ಳಿ – ತೀರ್ಥಮತ್ತೂರು : 100.5
- ತೀರ್ಥಹಳ್ಳಿ – ಆಗುಂಬೆ 1 : 97.4
- ತೀರ್ಥಹಳ್ಳಿ – ಮೇಗರವಳ್ಳಿ : 96.5
- ತೀರ್ಥಹಳ್ಳಿ – ನೆರಟೂರು : 85
- ತೀರ್ಥಹಳ್ಳಿ – ಆರಗ : 74
- ತೀರ್ಥಹಳ್ಳಿ – ಸಾಲ್ಗಡಿ : 73
- ಸಾಗರ – ಕೋಳೂರು : 48
- ಸಾಗರ – ಕಂಡಿಕಾ : 45.5
- ಸಾಗರ – ಕೆಳದಿ : 40
- ಸಾಗರ – ಕಲ್ಮನೆ : 39
- ಭದ್ರಾವತಿ – ಗುಡುಮಘಟ್ಟ : 37.5
- ಸಾಗರ – ಮಾಳ್ವೆ : 36.5
- ಹೊಸನಗರ – ಸೊನಲೆ : 36
- ಸಾಗರ – ಭೀಮನೇರಿ : 35.5
- ಸೊರಬ – ನ್ಯಾರಸಿ : 34.5
- ಸೊರಬ – ಹೆಚ್ಚೆ : 34
- ಹೊಸನಗರ – ಮಾರುತಿಪುರ : 32.5
- ಸಾಗರ – ಭೀಮನಕೋಣೆ : 32.5
- ಹೊಸನಗರ – ಮೇಲಿನಬೆಸಿಗೆ : 32
- ಸೊರಬ – ಗುಡುವಿ : 30.5
ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :
- ಶೃಂಗೇರಿ – ಬೇಗಾರು : 204.5
- ಕೊಪ್ಪ – ಶಾನುವಳ್ಳಿ : 185
- ಕೊಪ್ಪ – ನಿಲುವಾಗಿಲು : 150
- ಶೃಂಗೇರಿ – ಮೆಣಸೆ : 137
- ಶೃಂಗೇರಿ – ಧರೆಕೊಪ್ಪ : 129
- ಕೊಪ್ಪ – ಕೊಪ್ಪ(ಗ್ರಾಮೀಣ) : 123.5
- N.R.ಪುರ – ಕರ್ಕೇಶ್ವರ(ಮೇಲ್ಪಾಲ್) : 121.5
- ಕೊಪ್ಪ – ಭುವನಕೋಟೆ : 118
- ಕೊಪ್ಪ – ಕಮ್ಮರಡಿ : 112
- ಕೊಪ್ಪ – ಅತ್ತಿಕೊಡಿಗೆ : 105
- ಮೂಡಿಗೆರೆ – ತ್ರಿಪುರ : 86.5
- ಕಳಸ – ಹೊರನಾಡು : 82.5
- ಕೊಪ್ಪ – ಅಗಳಗಂಡಿ : 78
- ಮೂಡಿಗೆರೆ – ಕಿರುಗುಂದ : 70.5
- N.R.ಪುರ – ಬನ್ನೂರು : 61.5
- ಮೂಡಿಗೆರೆ – ಹಂತೂರು : 60
- N.R.ಪುರ – ಬಾಳೆ : 56.5
- ಮೂಡಿಗೆರೆ – ಕೂವೆ : 49
- N.R.ಪುರ – ಮಾಗುಂಡಿ : 48.5
- ಚಿಕ್ಕಮಗಳೂರು – ಬೈರವಳ್ಳಿ (ಮಲಂದೂರು) : 41.5
- ಮೂಡಿಗೆರೆ – ಬಾಳೂರು : 39
- ಮೂಡಿಗೆರೆ – ಕುಂದೂರು : 36
- ಮೂಡಿಗೆರೆ – ಹಳೆಮುಡಿಗೆರೆ : 30
- N.R.ಪುರ – ನಾಗಲಾಪುರ : 30

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.