RIPPONPETE | ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಎಣ್ಣೆನೋಡ್ಲುವಿನಿಂದ ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸವನ್ನು ರಿಪ್ಪನ್‌ಪೇಟೆಗೆ ಸಾಗಿಸುತ್ತಿದ್ದಾರೆಂಬ ಮಾಹಿತಿಯನ್ನಾದರಿ ಪೊಲೀಸರು ಮೂಗುಡ್ತಿ ಬಳಿ ವಾಹನ ತಡೆದು ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸವನ್ನು ಪತ್ತೆ ಮಾಡುವ ಮೂಲಕ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಎಣ್ಣೆನೋಡ್ಲು ವಾಸಿಗಳಾದ ಅಕ್ರಂ (32), ಭಾಷಾ (30) ಮತ್ತು ಸಾದಿಕ್ (40) ಬಂಧಿತ ಆರೋಪಿಗಳು. ಇವರಿಂದ 19 ಸಾವಿರ ರೂ. ಮೌಲ್ಯದ 80 ಕೆ.ಜಿ. ಗೋಮಾಂಸ ಮತ್ತು ಒಂದು ಪ್ಯಾಸೆಂಜರ್ ಆಟೋವನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

