ಶಿವಮೊಗ್ಗ:ಶಿವಮೊಗ್ಗ–ಭದ್ರಾವತಿ ರೈಲು ಮಾರ್ಗದಡಿ ಇರುವ ಕೆಲವು ಲೆವೆಲ್ ಕ್ರಾಸಿಂಗ್ (ಎಲ್‌ಸಿ)ಗಳಲ್ಲಿ ಪರೀಕ್ಷಾ ಕಾರ್ಯ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಅವಧಿಗೆ ವಾಹನ ಸಂಚಾರವನ್ನು ನಿಷೇಧಿಸಿ, ಬದಲಿ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಅಪರ ಜಿಲ್ಲಾಧಿಕಾರಿಗಳು ನೀಡಿರುವ ಆದೇಶದ ಪ್ರಕಾರ, ಎಲ್‌ಸಿ ನಂ. 35, 38 ಹಾಗೂ 38/ಎಗಳಲ್ಲಿ ತಾತ್ಕಾಲಿಕವಾಗಿ ರೈಲು ಮಾರ್ಗ ಪರಿಶೀಲನೆ ಮತ್ತು ಎಲ್‌ಸಿ ಓಪನ್ ಪರೀಕ್ಷಾ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 19ರಿಂದ 25ರವರೆಗೆ ವಿವಿಧ ದಿನಗಳಲ್ಲಿ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ.
ಎಲ್‌ಸಿ 35 – ಲಕ್ಷ್ಮೀಪುರ ರಸ್ತೆ
- ಮುಚ್ಚುವ ಅವಧಿ: ಅ.19 ಬೆಳಿಗ್ಗೆ 8 ಗಂಟೆಯಿಂದ ಅ.20 ಸಂಜೆ 6 ಗಂಟೆವರೆಗೆ
- ಬದಲಿ ಮಾರ್ಗ: ಬಿ.ಹೆಚ್. ರಸ್ತೆ ಮುಖಾಂತರ ಕಡದಕಟ್ಟೆ–ಹೆಬ್ಬಂಡಿ ರಸ್ತೆ ಸಂಪರ್ಕ–ಲಕ್ಷ್ಮೀಪುರ ರಸ್ತೆ ಮಾರ್ಗ
ಎಲ್‌ಸಿ 38 – ನವುಲೆ ಬಸವಾಪುರ ರಸ್ತೆ
- ಮುಚ್ಚುವ ಅವಧಿ: ಅ.22 ಬೆಳಿಗ್ಗೆ 8 ಗಂಟೆಯಿಂದ ಅ.23 ಸಂಜೆ 6 ಗಂಟೆವರೆಗೆ
- ಬದಲಿ ಮಾರ್ಗ: ಎಲ್‌ಸಿ 35 ಮುಖಾಂತರ ಮಜ್ಜಿಗೇನಹಳ್ಳಿ–ನವುಲೆ ಬಸವಾಪುರ ಸಂಪರ್ಕ ರಸ್ತೆ
ಎಲ್‌ಸಿ 38/ಎ – ಹೊನ್ನವಿಲೆ ರಸ್ತೆ
- ಮುಚ್ಚುವ ಅವಧಿ: ಅ.24 ಬೆಳಿಗ್ಗೆ 8 ಗಂಟೆಯಿಂದ ಅ.25 ಸಂಜೆ 6 ಗಂಟೆವರೆಗೆ
- ಬದಲಿ ಮಾರ್ಗ: ಎಲ್‌ಸಿ 38 ಮುಖಾಂತರ ನವುಲೆ ಬಸವಾಪುರ ರಸ್ತೆ–ಹೊನ್ನವಿಲೆ ರಸ್ತೆ ಮಾರ್ಗ
ಜಿಲ್ಲಾಡಳಿತವು ವಾಹನ ಸವಾರರು ಮತ್ತು ಸಾರ್ವಜನಿಕರು ಈ ಬದಲಿ ಮಾರ್ಗಗಳಲ್ಲಿ ನಿರ್ದಿಷ್ಟ ದಿನಾಂಕಗಳ ಅವಧಿಯಲ್ಲಿ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸಲು ಮನವಿ ಮಾಡಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಸಾವು !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650