ಅಪರಾಧ ಸುದ್ದಿ

4 ಲಕ್ಷ ರೂ. ಹಣವಿದ್ದ ಬ್ಯಾಗ್ ಹೋಟೆಲ್‌ನಲ್ಲಿ ಬಿಟ್ಟು ಹೋದ ಗ್ರಾಹಕ, ವಾಪಾಸ್ ಬಂದು ನೋಡಿದಾಗ ಆತನಿಗೆ ಕಾದಿತ್ತು ಶಾಕ್ !

SHIVAMOGGA | ನಗರದ ಬ್ರೈಟ್ ಹೋಟೆಲ್‌ನಲ್ಲಿ (Hotel) ಗ್ರಾಹಕ ಬಿಟ್ಟು ಹೋದ 4 ಲಕ್ಷ ರೂ. ಇದ್ದ ಹಣದ ಚೀಲವನ್ನು (Money Bag) ಅಲ್ಲಿನ ಸರ್ವರ್ ಎತ್ತಿಕೊಂಡು ಹೋದ ಘಟನೆ ಸಂಭವಿಸಿದ್ದು, ಆತನನ್ನು ಬಂಧಿಸಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸಾಗರ ತಾಲೂಕು ಜಂಬಾನಿ ಗ್ರಾಮದ ವಾಸಿ ಲೋಕೇಶ್ ಎನ್ನುವವರು ತನ್ನ ಸ್ನೇಹಿತನೊಂದಿಗೆ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ 4 ಲಕ್ಷ ರೂ. ಇದ್ದ ಚೀಲವನ್ನು ಟೇಬಲ್ ಮೇಲೆ ಇಟ್ಟಿದ್ದರು. ಅವರಸರಲ್ಲಿ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯದ ನಂತರ ಕಾರಿನಲ್ಲಿ ಬ್ಯಾಗ್ ಇಲ್ಲದೇ ಇರುವುದು ಕಂಡುಬಂದಿದ್ದು, ವಾಪಾಸ್ ಹೋಟೆಲ್‌ಗೆ ಬಂದು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಹೋಟೆಲ್‌ನಲ್ಲಿ ಸರ್ವರ್ ಕೆಲಸ ಮಾಡುವ ಹೇಮಂತ್ ಕುಮಾರ್ ಎಂಬುವವನು ಬ್ಯಾಗ್ ಅನ್ನು ತೆಗೆದು ನೋಡಿ ಸ್ಟೋರ್ ರೂಮಿನಲ್ಲಿ ಇಡುವ ದೃಶ್ಯಾವಳಿ ಕಂಡು ಬಂದಿತು.

ಫೋನ್ ಮಾಡಿ ಆತನಿಗೆ ಹಣದ ಬ್ಯಾಗ್ ನ ಬಗ್ಗೆ ವಿಚಾರ ಮಾಡಿದಾಗ ಯಾವುದೇ ಬ್ಯಾಗ್, ನಗದು ಹಣ ನಾನು ತೆಗೆದುಕೊಂಡಿಲ್ಲವೆಂದು ಹೇಳಿ ಫೋನ್ ಕಟ್ ಮಾಡಿದ್ದನು. ಅಲ್ಲದೆ ಬೆಳಿಗ್ಗೆ ಹೋಟೆಲ್‌ನ ಕೆಲಸಕ್ಕೂ ಕೂಡ ಬಂದಿರಲಿಲ್ಲ. ಆದ್ದರಿಂದ ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಹೇಮಂತ್ ಕುಮಾರ್ ಮೇಲೆ ಪ್ರಕರಣ ದಾಖಲಿಸಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಪೊಲೀಸರ ತಂಡವು ತಂಡವು ಪ್ರಕರಣದ ಆರೋಪಿತ ಹೇಮಂತ್ ಕುಮಾರ್ ಅಲಿಯಾಸ್ ಹೇಮಂತ್ (40) ಈತ ವಾಸವಿರುವ ಅಶೋಕ ನಗರದ ಮನೆಗೆ ತೆರಳಿ ಬಂಧಿಸಿ ಆತನಿಂದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

Read More

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸೈದ್ಧಾಂತಿಕ ಗೆಲುವಲ್ಲ ; ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]