ಹೊಸನಗರ ತಾಲೂಕಿನ ಹಲವೆಡೆ ಭಾರಿ ವರ್ಷಧಾರೆ, ಕೇಳುವವರಿಲ್ಲ ರೈತರ ಗೋಳು, ಕೈಕೊಟ್ಟ ಕರೆಂಟ್ !

0 547

ಹೊಸನಗರ: ತಾಲ್ಲೂಕಿನಲ್ಲಿ ಸುಮಾರು 5 ದಿನಗಳಿಂದ ಮೋಡಕವಿದ ವಾತಾವರಣವಿದ್ದು ಮಂಗಳವಾರ ಸಂಜೆ 5ಗಂಟೆ ಇಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲು ಪ್ರಾರಂಭಿಸಿದೆ.

ಕೋಡೂರು, ಗರ್ತಿಕೆರೆ, ಹುಂಚ, ನಿಟ್ಟೂರು, ನಗರ, ಸಂಪೆಕಟ್ಟೆ ಸೇರಿದಂತೆ ತಾಲೂಕಿನ ಹಲವೆಡೆ ಭಾರಿ ಪ್ರಮಾಣದ ಮಳೆ ಬಿದ್ದಿದೆ.

ಫೋಟೋ : ಸುಧೀಂದ್ರ ಭಂಡಾರ್ಕರ್

ರೈತರ ಗೋಳು ಕೇಳುವವರ್ಯಾರು ?
ಹೊಸನಗರದಲ್ಲಿ 5 ದಿನಗಳಿಂದ ಮಳೆಯ ವಾತಾವರಣವಿದ್ದು ಈಗ ರೈತರು ಬೆಳೆದ ಭತ್ತ, ಅಡಿಕೆ, ಕಾಫಿ, ಕಾಳುಮೆಣಸು ಮತ್ತು ಮುಸುಕಿನ ಜೋಳ ಕಟಾವಿನ ಸಮಯವಾಗಿರುವುದರಿಂದ ಮಳೆಯ ಹೊಡೆತಕ್ಕೆ ಬೆಳೆಗಳು ಹಾನಿಯಾಗುತ್ತಿದೆ.

ವಿದ್ಯುತ್ ಇಲ್ಲದೆ ಪರದಾಟ
ಇದರ ಜೊತೆಗೆ ತುರ್ತು ಕಾರ್ಯನಿಮಿತ್ತ ಇಂದು ಬೆಳಿಗ್ಗೆ 10 ಗಂಟೆಯಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು ಇಲ್ಲಿತನಕ ವಿದ್ಯುತ್ ಇಲ್ಲದೆ ಜನರು ಪರದಾಟ ನಡೆಸುತ್ತಿದ್ದಾರೆ.

Leave A Reply

Your email address will not be published.

error: Content is protected !!