ಮಾ. 26 ರಿಂದ ಏ. 4 ರವರಗೆ ಹೊಂಬುಜ ಜಗನ್ಮಾತೆ ಪದ್ಮಾವತಿ ಮತ್ತು ಪಾರ್ಶ್ವನಾಥ ತೀರ್ಥಂಕರ ವಾರ್ಷಿಕ ಜಾತ್ರಾ ಮಹಾರಥೋತ್ಸವ

0 269

ರಿಪ್ಪನ್‌ಪೇಟೆ: ಜೈನರ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಹೊಂಬುಜ ಜೈನಮಠದಲ್ಲಿ ಮಾ. 26 ರಿಂದ ಏ. 4 ರವರಗೆ ಭಗವಾನ್ ಶ್ರೀಪಾರ್ಶ್ವನಾಥ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರ ವಾರ್ಷೀಕ ಜಾತ್ರಾ ರಥೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಠದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದರು.

ಮಾ. 26 ರಂದು ಮಂಗಳವಾರ ಶ್ರೀಮಠದ ಬಸದಿಯಲ್ಲಿ ನೇಮಿನಾಥ ಸ್ವಾಮಿ ಬಸದಿ ಗಣಧರವಲಯ ಆರಾಧನೆ, 27 ರಂದು ಬುಧವಾರ ಮಕ್ಕಳ ಬಸದಿಯಲ್ಲಿ ಶ್ರೀಪಾರ್ಶ್ವನಾಥ ಸ್ವಾಮಿ ಚಿಕ್ಕಬಸದಿ ಕಲ್ಯಾಣಮಂದಿರ ಆರಾಧನೆ, 28 ರಂದು ಗುರುವಾರ ಶ್ರೀ ಭೋಗಾರ ಬಸದಿಯಲ್ಲಿ ಭಕ್ತಾಮರ ಆರಾಧನೆ, 29 ರಂದು ಶುಕ್ರವಾರ ಇಂದ್ರಪ್ರತಿಷ್ಟೆ, ವಿಮಾನ ಶುದ್ಧಿ, ಯಕ್ಷಪ್ರತಿಷ್ಟೆ, ದ್ವಜಾರೋಹಣ, ಮಹಾನೈವೇಧ್ಯ ಪೂಜೆ, ನಾಂದಿಮಂಗಲ, ವಾಸ್ತುಶಾಂತಿ, ಮೃತ್ತಿಕಾ ಸಂಗ್ರಹ ರಾತ್ರಿ 8 ಗಂಟೆಗೆ ನಾಗವಾಹನೋತ್ಸವ, 30 ರಂದು ಶನಿವಾರ ನಿತ್ಯವಿಧಿ ಶ್ರೀಸ್ವಾಮಿ ಮತ್ತು ಅಮ್ಮನವರ ಸನ್ನಿಧಿಯಲ್ಲಿ ಆಭಿಷೇಕ ಕಲಿಕುಂಡಯಂತ್ರಾರಾಧನೆ ಹಾಗೂ ಸಿಂಹವಾಹನೋತ್ಸವ. 31 ರಂದು ಭಾನುವಾರ ನಿತ್ಯವಿಧಿ ಸಹಿತ ಜಲಾಗ್ನಿ ಹೋಮ ಶಾಂತಿಚಕ್ರಾರಾಧನೆ ಶ್ರೀಬಲಿ ಸಂಜೆ 6 ಕ್ಕೆ ಧಾರ್ಮಿಕ ಸಭೆ ಸಿದ್ದಾಂತ ಕೀರ್ತಿ ಪ್ರಶಸ್ತಿ ಪ್ರದಾನ ಸಮಾರಂಭ ರಾತ್ರಿ 8 ಕ್ಕೆ `ಬೆಳ್ಳಿ ರಥೋತ್ಸವ ಮತ್ತು ಪುಷ್ಪ ರಥೋತ್ಸವ’ ಏಪ್ರಿಲ್ 1 ರ ಸೋಮವಾರದಂದು ಮೂಲನಕ್ಷತ್ರದಲ್ಲಿ ನಿತ್ಯವಿಧಿ ಸಹಿತ ಮಹಾನೈವೇದ್ಯ ಪೂಜೆ ಮಧ್ಯಾಹ್ನ 1:25 ಕ್ಕೆ “ಮಹಾರಥೋತ್ಸವ ‘’. 2 ಮಂಗಳವಾರ ತ್ರಿಕೂಟ ಜಿನಾಲಯದ (ಗುಡ್ಡದ ಬಸದಿಯ) ಭಗವಾನ್ ಶ್ರೀಪಾರ್ಶ್ವನಾಥಸ್ವಾಮಿಗೆ 108 ಕಲಶಗಳ ಮಹಾಭಿಷೇಕ, 3 ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ಕುಂಕುಮೋತ್ಸವ ಧ್ವಜಾರೋಹಣ ಕಾರ್ಯಕ್ರಮಗಳು ಹೊಂಬುಜ ಜೈನಮಠದ ಜಗದ್ಗುರು ಡಾ.ಶ್ರೀಮದ್ದ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿಯವರ ದಿವ್ಯಸಾನಿದ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳಿಂದ ನೆರವೇರುವವು ಎಂದು ಮಠದ ಆಡಳಿತಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ರಿಪ್ಪನ್‌ಪೇಟೆ ಮಾ. 25 ರಂದು 21ನೇ ವರ್ಷದ ಪ್ರತಿಷ್ಟಾವರ್ಧಂತಿ ಮಹೋತ್ಸವ

ರಿಪ್ಪನ್‌ಪೇಟೆ: ಇಲ್ಲಿನ ತಿಲಕ್‌ನಗರದಲ್ಲಿರುವ ಶ್ರೀನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಮಾರ್ಚ್ 25 ರಂದು ಸೋಮವಾರ ಬೆಳಗ್ಗೆ 8:30ಕ್ಕೆ 21ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

21ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀನಾಗದೇವರ ಸನ್ನಿಧಾನದಲ್ಲಿ ಕಲಾ ಹೋಮ, ನವಕ ಪ್ರಧಾನ ಕಲಶ, ಕಲಶಾಭಿಷೇಕ, ಅಧಿವಾಸ ಹೋಮ, ಪವಮಾನ ಅಭಿಷೇಕ, ಆಶ್ಲೇಷ ಬಲಿ. ಶ್ರೀ ರಕ್ತೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಶ್ರೀದುರ್ಗಾ ಹೋಮ, ಕಲಶಾಭಿಷೇಕ, ಮಹಾಪೂಜೆ ತೀರ್ಥ ಪ್ರಸಾದ ವಿನಿಯೋಗ “ನಾಗದರ್ಶನ’’ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ.

ಇದೇ ದಿನ ರಾತ್ರಿ 7 ಗಂಟೆಗೆ ಅಲಸೆ ಶ್ರೀನಾಗೇಶ್ವರಿ ಸುಬ್ರಹ್ಮಣ್ಯ ಕೃಪಾಶ್ರಿತ ಯಕ್ಷಗಾನ ಮೇಳದವರಿಂದ “ಶ್ರೀಚಂಡಿಕೇಶ್ವರಿ ಮಹಾತ್ಮೆ’’ ಎಂಬ ಪೌರಾಣಿಕ ಕಥಾನಕ ಕಾಲಮೀತಿ ಯಕ್ಷಗಾನ ಪ್ರದರ್ಶನ ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!