ಮೀಸಲಾತಿಗಾಗಿ ಹೋರಾಟವೇ ಹೊರತು ಸರ್ಕಾರದ ವಿರುದ್ಧವಲ್ಲ

0 145

ರಿಪ್ಪನ್‌ಪೇಟೆ: ಕಾಂಗ್ರೆಸ್ ಅಥವಾ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸರ್ಕಾರಗಳಿರಲಿ ನಮ್ಮದು ಮೀಸಲಾತಿ ಅನುಷ್ಟಾನಗೊಳಿಸುವಂತೆ ಅಗ್ರಹಿಸುವ ಹೋರಾಟ ನಮ್ಮದು.ಈ ಹೋರಾಟವನ್ನು ಹತ್ತಿಕ್ಕುವ ಕೆಲಸ ಯಾರು ಮಾಡಬಾರದು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅವರು ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪಂಚಮಸಾಲಿ ವೀರಶೈವ ಲಿಂಗಾಯಿತ ಸಮಾಜ ಸ್ವಾಭಿಮಾನಿ ಸಮಾಜವಾಗಿದ್ದು ಶಾಲೆ, ಆಸ್ಪತ್ರೆ, ಮಠ-ಮಾನ್ಯಗಳಿಗೆ ಭೂಮಿಯನ್ನು ದಾನ ಮಾಡಿದ ಸಮಾಜವಾಗಿದೆ. ಅಲ್ಲದೆ ದಾಸೋಹ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಸಮಾಜವೆಂದರೆ ಅದು ಪಂಚಮಸಾಲಿ ವೀರಶೈವ ಲಿಂಗಾಯಿತ ಸಮಾಜದಾಗಿದೆ. ನಾವು ಉದ್ದಾರಿಗಳು ಸಮಾಜದ ಸಂಘಟನೆಯಲ್ಲಿ ನಾವು ಹಿಂದುಳಿಯದೆ ಸದಾ ಚಟುವಟಿಕೆಯಲ್ಲಿರುವ ಸಮಾಜ ನಮ್ಮದು. ಪಂಚಮಸಾಲಿ ಲಿಂಗಾಯಿತದಲ್ಲಿ ಸಾಕಷ್ಟು ಉಪಪಂಗಡಗಳು ಇದ್ದು ಅವುಗಳನ್ನು ಈ ಹೋರಾಟದಲ್ಲಿ ತೊಡಗಿಸಿಕೊಂಡು ಜಾಗೃತರನ್ನಾಗಿಸುವ ನಿಟ್ಟಿನಲ್ಲಿ ನಾನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಾ ಸಮಾಜದ ಸಂಘಟನೆಯಲ್ಲಿ ತೊಡಗಿಕೊಂಡಿರುತ್ತೇನೆ. ಈಗಾಗಲೇ ನಮ್ಮ ಈ ಹಿಂದಿನ ಮೂರುವರ್ಷದ ಹೋರಾಟದ ಫಲದಿಂದಾಗಿ ಚುನಾವಣೆಯಲ್ಲಿ ಕೆಲವು ಪಕ್ಷ ಸೋಲು ಅನುಭವಸಿದರೆ ಇನ್ನೂ ಕೆಲವು ಪಕ್ಷದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದರಿಂದ ಕೆಲವು ಪಕ್ಷದವರು ಪಾಠ ಕಲಿತ್ತಿದ್ದಾರೆಂದು ಹೇಳಿ ಮುಂದಿನ ದಿನಗಳಲ್ಲಿ ನಾನು ಪ್ರತಿಭಟನೆಯ ರೂಪುರೇಷೆ ಕುರಿತು ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪಂಚಮಸಾಲಿ ಲಿಂಗಾಯ್ತಿ ಉಪಪಂಗಡಗಳ ಮಾಹಿತಿಯನ್ನು ಪಡೆಯುವ ಕಾರ್ಯದಲ್ಲಿ ತೊಡಗಿದ್ದು ಮೀಸಲಾತಿ ಸಮರ್ಪಕವಾಗಿ ಅನುಷ್ಠಾನಗೊಳ್ಳುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ. 12ನೇ ಶತಮಾನದಲ್ಲಿನ ಕಲ್ಯಾಣಕ್ರಾಂತಿ ಮಾಡಿದ ಬಸವಣ್ಣನವರಂತೆ ಕರ್ನಾಟಕ ಕ್ರಾಂತಿ ಮಾಡುವ ಬಗ್ಗೆ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಕೆಯನ್ನು ನೀಡಿದರು.

ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪಂಚಮಸಾಲಿ ವೀರಶೈವ ಲಿಂಗಾಯ್ತಿರನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಿ ಘೋಷಣೆ ಮಾಡುವುದು ಮತ್ತು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಸರ್ಕಾರ ಶಿಫಾರಸಿಗೆ ಆಗ್ರಹಿಸುವ ಮೂಲಕ ಮುಂದಿನ ದಿನಗಳಲ್ಲಿ ವಿನೂತನ ಪ್ರತಿಭಟನೆಯ ಕುರಿತು ಸಮಾಜ ಭಾಂದವರಲ್ಲಿ ಚರ್ಚಿಸಿರುವುದಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಹಕ್ರೆಮಲ್ಲಿಕಾರ್ಜುನಗೌಡ, ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜ್‌ಗೌಡ, ಜೆ.ಎಸ್.ಚಂದ್ರಣ್ಣ, ಹೆಚ್.ಎಂ.ವರ್ತೇಶ್ ಹುಗುಡಿ, ಡಿ.ಎಸ್.ರಾಜಾಶಂಕರ, ಡಿ.ಈ.ಮಧುಸೂದನ್, ಜಿ.ಎಂ.ಮಲ್ಲಿಕಾರ್ಜುನ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಗೌಡ, ಹಾಲುಗುಡ್ಡೆ ರವಿ, ಜೆ.ಎಂ.ಶಾಂತಕುಮಾರ್‌ ಜಂಬಳ್ಳಿ, ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!