ಮಲ್ನಾಡ್‌ ಕ್ಲಬ್ ಅಧ್ಯಕ್ಷ ಜೆ.ಟಿ. ಸುಂದರೇಶ್ ಇನ್ನಿಲ್ಲ !

0 381

ತೀರ್ಥಹಳ್ಳಿ : ಇಲ್ಲಿನ ಮಲ್ನಾಡ್‌ ಕ್ಲಬ್ ಅಧ್ಯಕ್ಷ ಜೆ.ಟಿ. ಸುಂದರೇಶ್ (68) ಮಂಗಳವಾರ ಸಂಜೆ ಆನಂದಗಿರಿ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಸಹ್ಯಾದ್ರಿ ಪಾಲಿಟೆಕ್ನಿಕ್‌ ಕಾಲೇಜಿನ ನಿವೃತ್ತ ಪಾಂಶುಪಾಲರಾಗಿದ್ದ ಅವರು ಕಾಲೇಜಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತುಂಗಾ ವಿದ್ಯಾವರ್ಧಕ ಸಂಘದ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರ ಅಂತ್ಯಕ್ರಿಯೆ ಬೆಜ್ಜವಳ್ಳಿ ಸಮೀಪದ ಗಂಟೆ ಜನಗಲ್ ಸ್ವಗ್ರಾಮದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave A Reply

Your email address will not be published.

error: Content is protected !!