ರಂಭಾಪುರಿ ಜಗದ್ಗುರುಗಳ ಶ್ರಾವಣ ಮಾಸದ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡ ಭಕ್ತರು

0 47


ರಿಪ್ಪನ್‌ಪೇಟೆ: ಪಂಚ ಪೀಠಗಳಲ್ಲೊಂದಾದ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ 1108 ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಮಹಾಭಗವತ್ಪಾದರವರ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆಯಲ್ಲಿ ಮಸರೂರು ಗ್ರಾಮದ ರೈತ ಕುಟುಂಬ ಭಾಗವಹಿಸಿ ವಿಶೇಷ ಪೂಜೆ ನೆರವೇರಿಸಿ ಶ್ರೀಗಳವರ ದರ್ಶನಾಶೀರ್ವಾದ ಪಡೆದರು.


ಮಳೆಯಿಲ್ಲದೆ ರೈತಾಪಿ ವರ್ಗ ಕಂಗಾಲಾಗಿದ್ದು ಬೆಳೆ ಸಂಪೂರ್ಣ ಒಣಗುವಂತಾಗಿ ದಿಕ್ಕು ತೋಚದ ಸ್ಥಿತಿ ತಲುಪುವಂತಾಗಿದೆ. ಇಷ್ಟಲಿಂಗ ಮಹಾಪೂಜೆಯಿಂದ ಲೋಕೋದ್ದಾರವಾಗುವಂತಾಗಲಿ ಮಳೆ ಸಂವೃದ್ದವಾಗಿ ಸುರಿದು ರೈತರ ಫಸಲು ಸಂವೃದ್ದಿಯಾಗಿ ಬೆಳೆಯಲೆಂದು ರೈತ ಕುಟುಂಬಕ್ಕೆ ಅರೋಗ್ಯ ಐಶ್ವರ್ಯ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸಿ ಆಶೀರ್ವದಿಸಿದರು.


ಈ ಸಂದರ್ಭದಲ್ಲಿ ಮಸರೂರು ಎಂ.ಆರ್.ಆಶೋಕ್‌ಗೌಡ, ಎಂ.ಎಸ್.ಜಗದೀಶ್ ಮತ್ತು ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ಗಜಾನನ ಸೇವೆ ಸಮಿತಿಯ ಅಧ್ಯಕ್ಷರಾಗಿ ಗೋಪಾಲ್ ಹಾಡಿಮನೆ ಅವಿರೋಧ ಆಯ್ಕೆ


ಹೊಸನಗರ: ಪಟ್ಟಣದ ಕೋರ್ಟ್ ಸರ್ಕಲ್ ಆವರಣದಲ್ಲಿ 43ನೇ ವರ್ಷದ ಗಣಪತಿ ವಿಗ್ರಹ ಪ್ರತಿಷ್ಠಾಪಿಸುವ ಶ್ರೀ ಗಜಾನನ ಸೇವೆ ಸಮಿತಿಯ ಅಧ್ಯಕ್ಷರಾಗಿ ಗೋಪಾಲ್ ಹಾಡಿಮನೆಯವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸುಮಾರು 41 ವರ್ಷಗಳ ಕಾಲ ವಿಜೃಂಭಣೆಯಿಂದ ಗಣಪತಿ ವಿಗ್ರಹವನ್ನು ಪ್ರತಿಷ್ಟಾಪಿಸಿ ಅದ್ದೂರಿ ಮನರಂಜನೆ ಕಾರ್ಯಕ್ರಮವನ್ನು ಏರ್ಪಡಿಸಿಕೊಂಡು ಬರುತ್ತಿದ್ದು ಕೊರೋನ ಸಂದರ್ಭದಲ್ಲಿ 2 ವರ್ಷ ವಿಜೃಂಭಣೆ ಕಾರ್ಯಕ್ರಮ ನಡೆಸದೇ ಹಾಗೇಯೇ ಪ್ರತಿಷ್ಠಾಪಿಸಿ ವಿಸರ್ಜಿಸಲಾಗಿತ್ತು ಆದರೆ ಈ ವರ್ಷ ಅದ್ಧೂರಿ ಮನರಂಜನೆ ಕಾರ್ಯಕ್ರಮದೊಂದಿಗೆ ಗಣಪತಿಯನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಪ್ರತಿದಿನ ಪೂಜೆ ಮನರಂಜನೆ ಕಾರ್ಯಕ್ರಮವನ್ನು ಏರ್ಪಡಿಸುವ ಉದ್ದೇಶದಿಂದ ಗಜಾನನ ಸೇವೆ ಸಮಿತಿಯ ಅಧ್ಯಕ್ಷರನ್ನಾಗಿ ಗೋಪಾಲ್ ಹಾಡಿಮನೆಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಗೋಪಾಲ್ ಹಾಡಿಮನೆ


ಗೌರವಾಧ್ಯಕ್ಷರಾಗಿ ಕಟ್ಟೆ ಸುರೇಶ್, ಉಪಧ್ಯಾಕ್ಷರಾಗಿ ಟಿ.ಆರ್. ಶ್ರೀನಿವಾಸ್, ಕಾರ್ಯದರ್ಶಿಯಾಗಿ ಟಿ.ಆರ್ ಸುನೀಲ್‌ಕುಮಾರ್, ಖಜಾಂಚಿಯಾಗಿ ಕಂಕ್ರು ನಾಗರಾಜ್, ಸಹ ಕಾರ್ಯದರ್ಶಿಯಾಗಿ ಹೆಚ್.ಎಸ್. ಹರೀಶ್‌ರವರನ್ನು ಆಯ್ಕೆ ಮಾಡಲಾಗಿದ್ದು ನಿರ್ದೇಶಕರುಗಳಾಗಿ ಮನೋಹರ ಪಿ, ದಿನೇಶ ಹೆಚ್.ಎಸ್, ದ್ಯಾವರ್ಸ ಸುರೇಶ್, ಕುಮಾರ ಗೌಡ, ಚಂದ್ರಶೇಖರ ಎನ್, ರಾಘವೇಂದ್ರ ಹೆಚ್.ಆರ್, ಶ್ರೀಪತಿರಾವ್, ಮಂಜುನಾಥ ಹೆಚ್.ಎಸ್, ಹೆಚ್.ಎಂ ನಿತ್ಯಾನಂದ, ಮಲ್ಲಿಕಾರ್ಜುನ ಎ.ವಿ, ವಕೀಲ ಗುರುಕಿರಣ್, ಮಂಜುನಾಥ, ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ, ಸುಗಂಧರಾಜ್, ನಾಗೇಶ ಕೆ.ಜಿ, ರಾಮು ಆಚಾರಿ, ಮಂಜುನಾಥ ಎಂ, ಶೀತಲ್ ಹೋಟೆಲ್ ಮಾಲೀಕ ಶ್ರೀನಿವಾಸ್, ಸುಬ್ರಹ್ಮಣ್ಯ, ಗೋಪಿ, ಸತೀಶ, ಆರುಣಾ, ಎಂ.ಪಿ. ಲೋಹಿತ್‌ರವನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.

Leave A Reply

Your email address will not be published.

error: Content is protected !!