ಸರ್ಕಾರಿ ನೌಕರರಿಗೆ ಶಿಸ್ತು ಮುಖ್ಯ ; ಪಿಡಿಒ ಉಮೇಶ್

0 46


ಹೊಸನಗರ : ಶಿಸ್ತು ಹಾಗೂ ಸಮಯ ಪರಿಪಾಲನೆ ನೀಡುವ ಸರಕಾರಿ ನೌಕರರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಪಿಡಿಒ ಉಮೇಶ್ ಹೇಳಿದರು.


ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿಯಲ್ಲಿ ಅವರಿಗೆ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬೀಳ್ಕೊಡುಗೆ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಹಲವು ರೀತಿಯ ಒತ್ತಡಗಳು, ಆಮಿಷಗಳು ಬರುತ್ತವೆ. ಆದರೆ ಅದ್ಯಾವುದಕ್ಕೂ ಮಣಿಯದೇ, ನಿಯತ್ತಿನಿಂದ ಕೆಲಸ ಮಾಡಬೇಕು. ಒಮ್ಮೆ ವೃತ್ತಿ ಜೀವನದಲ್ಲಿ ಕಪ್ಪುಚುಕ್ಕೆ ಬಿದ್ದರೆ, ಇಡೀ ಸೇವಾವಧಿಯಲ್ಲಿ ಅದು ಕಾಡುತ್ತದೆ. ಕಾನೂನು ಕ್ರಮ ಎದುರಿಸುವಂತಹ ಹೀನ ಸ್ಥಿತಿಗೆ ನೌಕರರು ಹೋಗಬಾರದು. ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಆತನ ಕೈಕೆಳಗೆ ಕೆಲಸ ಮಾಡುವವರು ತಾನಾಗಿಯೇ ಶಿಸ್ತು ರೂಢಿಸಿಕೊಳ್ಳುತ್ತಾರೆ. ಆಗ ಆಡಳಿತ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ ಎಂದರು.


ಗ್ರಾಪಂ ಅಧ್ಯಕ್ಷ ಎಚ್.ಬಿ.ಚಿದಂಬರ್ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಲ್ಲಿ ಯಶಸ್ಸು ಲಭಿಸುತ್ತದೆ. ಶಿಸ್ತು ಪರಿಪಾಲಿಸುವ ಅಧಿಕಾರಿ ವಿರುದ್ಧ ದೂರುಗಳು ಬರುವುದು ಸಹಜ. ಆದರೆ ವೃಥಾ ಆರೋಪ ಮಾಡುವ ಬದಲು ಅವರ ಹಿಂದಿನ ಕರ್ತವ್ಯ ಬದ್ಧತೆಯನ್ನು ಅರಿತು ವ್ಯವಹರಿಸಬೇಕು ಎಂದರು.


ಪ್ರಭಾರ ಪಿಡಿಓ ಚೇತನ್, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಕಲಾವತಿ, ದೀಪಿಕಾ, ಸುಮಾ, ಭಾನುಮತಿ, ಸುವರ್ಣ, ಶಂಕರಶೆಟ್ಟಿ, ಗಣೇಶ್, ಪ್ರಕಾಶ್, ನಾರಾಯಣಪ್ಪ, ಇಂದ್ರೇಶ್, ಚಂದ್ರಪ್ಪ, ಸಿಬ್ಬಂದಿ ಕಿರಣ್, ಸುಮಂತ, ಶ್ರೀದೇವಿ, ಬಾಬಣ್ಣ, ಗೋಪಾಲ್, ಜಗದೀಶ್ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!