ಶಾಲೆಗೆ ಹೋಗುತ್ತಿದ್ದ ವೇಳೆ ಹೃದಯಾಘಾತ ; 7ನೇ ತರಗತಿ ವಿದ್ಯಾರ್ಥಿನಿ ಸಾವು !

0 1,136

ಮೂಡಿಗೆರೆ : ಶಾಲೆಗೆ (School) ಹೋಗುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿನಿಯೊಬ್ಬಳು (Student) ಮೃತಪಟ್ಟಿರುವ (Death) ಘಟನೆ ಕೆಸವಳಲು ಜೊಗಣ್ಣನಕೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮೂಡಿಗೆರೆ (Mudigere) ತಾಲೂಕಿನ ಜೊಗಣ್ಣನಕೆರೆ ಗ್ರಾಮದ ಅರ್ಜುನ ಸುಮ ದಂಪತಿಗಳ ಮಗಳಾದ ಸೃಷ್ಟಿ (13) ಮೃತ ವಿದ್ಯಾರ್ಥಿನಿ. ಈಕೆ ದಾರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತಿದ್ದಳು.

ಸೃಷ್ಟಿ ಇಂದು ಬೆಳಿಗ್ಗೆ 9:30ರ ಸಮಯದಲ್ಲಿ ಶಾಲೆಗೆ ಹೊಗುತ್ತಿದ್ದಾಗ ದಾರದಹಳ್ಳಿ ಸರ್ಕಲ್ ಬಳಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಸ್ಥಳೀಯರು ಆಕೆಯನ್ನು ಎಂಜಿಎಂ ಆಸ್ಪತ್ರೆಗೆ ರವಾನಿಸಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ಆಕೆಗೆ ತೀವ್ರ ಹೃದಯಾಘಾತವಾಗಿರುವುದಾಗಿ ಹೇಳಿದ್ದಾರೆ.

ಮೃತರು ತಾಯಿ-ತಂದೆ, ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರರನ್ನು ಅಗಲಿದ್ದಾರೆ.

Leave A Reply

Your email address will not be published.

error: Content is protected !!