ಎನ್‌ಇಪಿ ರದ್ದು ಖಂಡಿಸಿ ABVP ಸಹಿ ಸಂಗ್ರಹ

0 287

ಶಿವಮೊಗ್ಗ: ರಾಜ್ಯದಲ್ಲಿ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯನ್ನು ರದ್ದುಗೊಳಿಸುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಮತ್ತು ಇದರ ವಿರುದ್ಧ ಎಬಿವಿಪಿ (ABVP) ಕಾರ್ಯಕರ್ತರು ಇಂದು ಶಿವಪ್ಪನಾಯಕ ವೃತ್ತದಲ್ಲಿ ಸಹಿ (Signature) ಸಂಗ್ರಹಣೆ ಮಾಡಿ‌ ಸರ್ಕಾರಕ್ಕೆ ರವಾನಿಸಿದರು.

ರಾಜ್ಯದ ವಿದ್ಯಾರ್ಥಿಗಳ ಹಾಗೂ ಪೋಷಕರ ಹಿತಾಸಕ್ತಿಯನ್ನು ಕಡೆಗಣಿಸಿ ಎನ್‌ಇಪಿ ರದ್ದುಗೊಳಿಸುವ ನಿರ್ಧಾರ ಮಾಡಲಾಗಿದೆ. ಇದರಿಂದ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಕತ್ತಲಾಗುತ್ತದೆ. ರದ್ದುಪಡಿಸುವ ಮುನ್ನ ಚರ್ಚೆಯನ್ನೆ ಮಾಡಿಲ್ಲ. ಇದು ವಿದ್ಯಾರ್ಥಿಗಳ ವಿರೋಧಿಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ರದ್ದು ಮಾಡಬಾರದೆಂದು ಕಾರ್ಯಕರ್ತರು ತಿಳಿಸಿದರು.

ಎನ್‌ಇಪಿಯ ತ್ರಿಭಾಷಾ ಸೂತ್ರದ ಅನ್ವಯದಲ್ಲಿ ಹೆಚ್ಚಿನ ಮುಕ್ತತೆ ಇದೆ. ಪ್ರಾದೇಶಿಕ ಭಾಷೆಯ ಅವಗಣನೆ ಆಗಿಲ್ಲ. ಸಹಬಾಳ್ವೆ, ಸಮಾನತೆ, ರಾಷ್ಟ್ರೀಯತೆ, ಭಾರತೀಯತೆಗೆ ಮಹತ್ವ ನೀಡಿರುವುದು ತಪ್ಪು ಹೇಗಾಗುತ್ತದೆ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.

Leave A Reply

Your email address will not be published.

error: Content is protected !!