ಹಿಂದುಳಿದ ಜಾತಿ ಜನಾಂಗದವರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸಿ ; ತೀ.ನಾ. ಶ್ರೀನಿವಾಸ್

0 50


ಹೊಸನಗರ: ಹಿಂದುಳಿದ ನಾಯಕ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದು ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹಿಂದುಳಿದ ಜನಾಂಗದವರಿಗೆ ಸೂಕ್ತ ಸ್ಥಾನಮಾನ ಸಾಮಾಜಿಕ ಅರ್ಥಿಕ ಶೈಕ್ಷಣಿಕ ರಾಜಕೀಯ ಸ್ತಾನ ಮಾನ ನೀಡುವಂತೆ ಜಿಲ್ಲಾ ಹಿಂದುಳಿದ ಜನ ಜಾಗೃತಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್‌ರವರು ಒತ್ತಾಯಿಸಿದರು.


ಜಿಲ್ಲಾ ಹಿಂದುಳಿದ ಜನ ಜಾಗೃತಿ ವೇದಿಕೆ ಸೂಚನೆ ಮೇರೆಗೆ ಹೊಸನಗರ ಘಟಕದ ಸಭೆಯು ಹೊಸನಗರದ ಶ್ರೀ ಗಣಪತಿ ದೇವರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ಜಾತಿ ಜನಾಂಗದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ರಾಜಕೀಯ ಸ್ಥಾನಮಾನ ಕುರಿತಂತೆ ಸಮಗ್ರ ಮಾಹಿತಿ ಕ್ರೋಡೀಕರಿಸಿ ವರದಿ ಸಲ್ಲಿಸಲು ಆಯೋಗ ರಚಿಸಲಾಗಿತ್ತು. ಆಯೋಗ ವರದಿ ಸರಕಾರದ ಮುಂದೆ ಸಲ್ಲಿಸಲಾಗಿತ್ತು ಆದರೆ, ಓದಲು ಸಮಯವಿಲ್ಲವೆಂದು ಕುಮಾರಸ್ವಾಮಿಯವರು ಹೇಳಿದರು ಆ ವರದಿಯನ್ನು ಕಸದ ಬುಟ್ಟಿಗೆ ಹಾಕುವೆ ಎಂದು ಯಡಿಯೂರಪ್ಪನವರು ತಿರಸ್ಕರಿಸಿದ್ದರು ಆದರೆ ಮತ್ತೆ ಅದೇ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಈ ಸರಿಹೊತ್ತಿನಲ್ಲಿ ಅವರೇ ನೇಮಿಸಿದ್ದ ಆಯೋಗದ ವರದಿಯನ್ನು ಅಂಗೀಕರಿಸಿ ತುಳಿತಕ್ಕೊಳಗಾದ ಹಿಂದುಳಿದ ಎಲ್ಲಾ ಜಾತಿಯವರಿಗೂ ಸೂಕ್ತ ಅವಕಾಶಗಳು ಲಭ್ಯವಾಗುವಂತೆ ಕೂಡಲೇ ವರದಿಯನ್ನು ಅಂಗೀಕರಿಸುವಂತೆ ಸಭೆ ಸರ್ಕಾರವನ್ನು ಈ ಸಂದರ್ಭದಲ್ಲಿ ಆಗ್ರಹಿಸಿತು.


ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ನಿವೃತ್ತ ಪ್ರಂಶುಪಾಲ ರಾಚಪ್ಪ, ಉಮೇಶ್ , ನಟರಾಜ್, ಇಲಿಯಾಸ್, ಶಾಂತಮೂರ್ತಿ, ಟಿ.ಆರ್ ಕೃಷ್ಣಪ್ಪ, ಮಂಜುನಾಥ್ ಬ್ಯಾಣದ, ಶುಭಕರ ಪೂಜಾರಿ, ರಾಮಕೃಷ್ಣ ಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ಹಿಂದುಳಿದ ಜನಾಂಗದ ಟಿ.ಆರ್ ಕೃಷ್ಣಪ್ಪ ಅವರನ್ನು ಗೌರವಾಧ್ಯಕ್ಷರಾಗಿ ಮಂಜುನಾಥ್ ಬ್ಯಾಣದ ಅವರನ್ನು ಅಧ್ಯಕ್ಷರಾಗಿ ಇಲಿಯಾಸ್ ಉಪಾಧ್ಯಕ್ಷರಾಗಿ ಶುಭಕರ ಪುಜಾರಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿ ಹೊಣೆಹಾರಿಕೆಯನ್ನು ನೀಡಲಾಯಿತು.

Leave A Reply

Your email address will not be published.

error: Content is protected !!