ಹೊಸನಗರ ; ಮಾಸ್ತಿಕಟ್ಟೆಯಲ್ಲಿ ಅತಿ ಹೆಚ್ಚು 18 ಸೆಂ.ಮೀ. ಮಳೆ – ಮತ್ತೆಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ ?

0 38

ಹೊಸನಗರ : ತಾಲೂಕಿನಾದ್ಯಂತ ಭಾರಿ ಪ್ರಮಾಣದ ವರ್ಷಧಾರೆಯಾಗುತ್ತಿದ್ದು ಶನಿವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಮಾಸ್ತಿಕಟ್ಟೆಯಲ್ಲಿ 175 ಮಿಲಿ ಮೀಟರ್ ಅತಿ ಹೆಚ್ಚು ಮಳೆಯಾಗಿದೆ.

ಉಳಿದಂತೆ ಚಕ್ರಾನಗರ ಹಾಗೂ ಹುಲಿಕಲ್ಲಿನಲ್ಲಿ 160 ಮಿಲಿ ಮೀಟರ್, ಮಾಣಿ 155 ಮಿ.ಮೀ., ನಗರ 143.5 ಮಿ.ಮೀ., ಸಾವೇಹಕ್ಲು 140 ಮಿ.ಮೀ, ಯಡೂರು 138 ಮಿ.ಮೀ, ಸೊನಲೆ 136 ಮಿ.ಮೀ. ಮತ್ತು ಹೊಸನಗರದಲ್ಲಿ 35 ಮಿಲಿ ಮೀಟರ್ ಮಳೆಯಾಗಿದೆ.

1819 ಅಡಿ ಗರಿಷ್ಟಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1767.30 ತಲುಪಿದೆ. ಜಲಾಶಯಕ್ಕೆ 39536 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 1797.50 ಅಡಿ ದಾಖಲಾಗಿತ್ತು.

Leave A Reply

Your email address will not be published.

error: Content is protected !!