ಪ್ರಾರ್ಥನಾ ಮಂದಿರದ ಬಳಿ ಮದ್ಯದಂಗಡಿ ಬೇಡವೆ ಬೇಡ ; ಮದರಸ ವಿದ್ಯಾರ್ಥಿಗಳೊಂದಿಗೆ ಮುಸ್ಲಿಂ ಭಾಂದವರಿಂದ ಪ್ರತಿಭಟನೆ

0 65

ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಜುಮ್ಮಾ ಮಸೀದಿಯ ಮುಂಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಅಬಕಾರಿಯವರು ಸಿ.ಎಲ್.7 ಬಾರ್‌ ಅಂಡ್ ರೆಸ್ಟೋರೆಂಟ್‌ ಆರಂಭಿಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಈ ಹಿಂದೆ ಸಾಕಷ್ಟು ಪ್ರತಿಭಟನೆ ನಡೆಸಲಾದರೂ ಕೂಡಾ ಮದ್ಯದಂಗಡಿ ಮಾಲೀಕ ನ್ಯಾಯಾಲಯದ ಮೆಟ್ಟಿಲು ಹತ್ತಿ ಅಂಗಡಿ ಆರಂಭಿಸಲು ಪ್ರಯತ್ನಿಸಿದ್ದು ಶನಿವಾರ ಸಂಜೆ ಪೊಲೀಸ್ ರಕ್ಷಣೆಯೊಂದಿಗೆ ಮದ್ಯವನ್ನು ಅಂಗಡಿಗೆ ಇಳಿಸಲು ಮುಂದಾಗುವ ಮುನ್ನವೇ ಮಸೀದಿಯ ಮದರಸದ ನೂರಾರು ವಿದ್ಯಾರ್ಥಿ ಸಮೂಹ ದಿಢೀರ್ ಪ್ರತಿಭಟನೆಗೆ ಮುಂದಾಗಿ ಧಿಕ್ಕಾರ ಕೂಗಿದಾಗ ರಕ್ಷಣೆ ನೀಡಲು ತೆರಳಿದ ಪೊಲೀಸರು ದಿಕ್ಕು ತೋಚದವರಂತಾಗಿರುವ ಘಟನೆ ರಿಪ್ಪನ್‌ಪೇಟೆಯಲ್ಲಿ ನಡೆದಿದೆ.

ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಇಲ್ಲಿನ ಮಸೀದಿಯ ಪಕ್ಕದಲ್ಲಿ ಮದರಸ ಶಾಲೆ ಇದ್ದು ಸುಮಾರು 250 ಕ್ಕೂ ಅಧಿಕ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಮದರಸ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು ಮಸೀದಿಗೂ ಈ ಮದ್ಯದಂಗಡಿಗೂ ಕೇವಲ ಕೆಲವೇ ಅಂತರವಿದೆ. ಸರ್ಕಾರದ ಅಬಕಾರಿ ನಿಯಮದಂತೆ ಮಸೀದಿ ಚರ್ಚ್ ಮತ್ತು ದೇವಸ್ಥಾನ ಶಾಲೆ ಕಾಲೇಜ್‌ಗಳಿಗೆ 100 ಮೀಟರ್ ಸುತ್ತಳತೆಯಲ್ಲಿ ಯಾವುದೇ ಮದ್ಯದಂಗಡಿಗಳು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂಬ ನಿಯಮ ಜಾರಿಯಲ್ಲಿದ್ದರೂ ಕೂಡಾ ಅಬಕಾರಿ ಇಲಾಖೆಯ ಅಧಿಕಾರಿಗಳು ತಮ್ಮ ಕಿಸೆ ತುಂಬಿಸಿದರೆ ಸಾಕು ಯಾವ ನಿಯಮವೂ ಇಲ್ಲದೆ ಪರವಾನಿಗೆ ನೀಡುತ್ತಾರೆಂಬುದಕ್ಕೆ ಇಲ್ಲಿನ ಜುಮ್ಮಾ ಮಸೀದಿಯ ಮುಂಭಾಗದಲ್ಲಿನ ರಾಯಲ್ ಕಂಫರ್ಟ್ ಲಾಡ್ಜ್ ನಲ್ಲಿ ಮದ್ಯದಂಗಡಿ ಪ್ರಾರಂಭಿಸಲು ಅನುಮತಿ ನೀಡಿ ಶಾಂತವಾಗಿದ್ದ ರಿಪ್ಪನ್‌ಪೇಟೆ ಪಟ್ಟಣಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿಬಿಟ್ಟಿದ್ದಾರೆ.

ಒಟ್ಟಾರೆಯಾಗಿ ಹೊಸನಗರ ರಸ್ತೆಯಲ್ಲಿ ಮದ್ಯದಂಗಡಿ ಆರಂಭಿಸುವ ವಿಚಾರದಲ್ಲಿ ಉದ್ವಿಗ್ನತೆಯ ವಾತಾವರಣ ಸೃಷ್ಠಿಯಾಗಿದ್ದು ಮದ್ಯ ಇಳಿಸಲು ಬಂದಿದ್ದ ವಾಹನವನ್ನು ತಡೆ ಮಾಡುವುದರೊಂದಿಗೆ ಮದರಸ ವಿದ್ಯಾರ್ಥಿಗಳೊಂದಿಗೆ ಪೋಷಕರು ಮಹಿಳೆಯರು ಪ್ರತಿಭಟನೆಯಲ್ಲಿ ತೊಡಗಿರುವುದನ್ನು ಕಂಡ ಪೊಲೀಸರು ತಕ್ಷಣ ಎಚ್ಚೆತ್ತುಕೊಳ್ಳುವುದರೊಂದಿಗೆ ಮದ್ಯ ತಂದ ವಾಹನವನ್ನು ಮಾಲು ಸಹಿತ ಅಬಕಾರಿ ಇಲಾಖೆವರಿಗೆ ಒಪ್ಪಿಸಿ ಪ್ರತಿಭಟನಾ ನಿರಂತರೊಂದಿಗೆ ಮಾತುಕತೆ ನಡೆಸಿ ಮದ್ಯದಂಗಡಿ ಆರಂಭಸದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದರು.

Leave A Reply

Your email address will not be published.

error: Content is protected !!