ಶಾಲೆಯಲ್ಲಿ ಆಟ ಆಡುವಾಗ ಇಂಗು ಗುಂಡಿಗೆ ಬಿದ್ದು ಬಾಲಕ ಸಾವು !

0 66

ಮೂಡಿಗೆರೆ : ಆಟ ಆಡುವಾಗ ಇಂಗು ಗುಂಡಿಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ನಡೆದಿದೆ.

ಅಶರ್ ಡಿ ಗುನ್ನಾ (8) ಮೃತ ಬಾಲಕ. ಹೊಸದಾಗಿ ನಿರ್ಮಾಣವಾಗುತ್ತಿದ್ದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆ ನಿರ್ಮಾಣಕ್ಕೆ ನೀರಿಗಾಗಿ ಇಂಗು ಗುಂಡಿ ನಿರ್ಮಾಣ ಮಾಡಿದ್ದರಿಂದ ಈ ಅವಘಡ ಸಂಭವಿಸಿದೆ.

ಶಾಲೆ ಕಟ್ಟಲು ಟ್ಯಾಂಕ್ ಅಥವ ಅಂಡರ್ ಗ್ರೌಂಡ್ ಟ್ಯಾಂಕ್ ನಿರ್ಮಾಣ ಮಾಡಬೇಕಾಗಿದ್ದು, ಫೀಲ್ಡ್ ಪಕ್ಕದಲ್ಲೇ ಇಂಗು ಗುಂಡಿ ನಿರ್ಮಾಣ ಮಾಡಿದ್ದರಿಂದ ಈ ಘಟನೆ ನಡೆದಿದೆ.

ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave A Reply

Your email address will not be published.

error: Content is protected !!