ಹೊಸನಗರ: ಸೇವಾಲಾಲ್ ಮಹಾರಾಜ್‌ರವರು ಭಾರತೀಯರ ಆಧ್ಯಾತ್ಮಿಕ ನಾಯಕ ಬಂಜಾರ ಸಂತ ಮತ್ತು ಸಂಸ್ತಾಪಕ ಎಂದು ಹೊಸನಗರ ತಾಲ್ಲೂಕು ಕಛೇರಿಯ ಗ್ರೇಡ್2 ತಹಶೀಲ್ದಾರ್ ರಾಕೇಶ್‌ರವರು ಹೇಳಿದರು.
ಹೊಸನಗರ ತಾಲ್ಲೂಕು ಕಛೆರಿಯ ಆವರಣದಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಲಾಗಿದ್ದು ಸೇವಾಲಾಲ್ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬಂಜಾರ್ ಸಮುದಾಯವು ತನ್ನದೇ ಆದಾ ವೇಷ ಭೂಷಣದಿಂದ ಭಾರತಿಯ ಶ್ರೀಮಂತ ಕಲಾ ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಇವರನ್ನು ಚಿಪ್ಸಿಗಳೆಂದು ಕರೆಯುತ್ತಿದ್ದರು ಭಾರತೀಯ ಸಂವಿಧಾನವು ಇವರನ್ನು ಅಧಿಸೂಚಿತ ಬುಡಕಟ್ಟು ಜನಾಂಗವೆಂದು ಪರಿಗಣಿಸಿ ವಿವಿಧ ರಾಜ್ಯಗಳಲ್ಲಿ ವಿವಿಧ ಬಗೆಯಲ್ಲಿ ಇವರನ್ನು ಇಂದಿಗೂ ಕರೆಯುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಚುನಾವಣೆ ಶಿರಾಸ್ಥೆದಾರ್ ವಿನಯ್ ಎಂ ಆರಾಧ್ಯ, ಉಪ ತಹಶೀಲ್ದಾರ್ ಹುಚ್ಚಾರಾಯಪ್ಪ ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ಆಹಾರ ಇಲಾಖೆಯ ನಾಗರಾಜ್, ರಾಘವೇಂದ್ರ, ಪ್ರವೀಣ್, ಸತೀಶ್,ಮಂಜುಳ, ಶ್ರೀಮತಿ ಶಿಲ್ಪಾ, ಸೌಮ್ಯ, ದೀಪಿಕಾ, ಮೇಘನ, ದನ್ಯಾ ಹೆಚ್.ಎಂ.ಇನ್ನೂ ಮುಂತಾದವರು ಉಪಸ್ಥಿತರಿದ್ದರು.