ಹೊಸನಗರ | ಮೂಲಭೂತ ಸೌಕರ್ಯಗಳ ವಂಚಿತವಾದ ಗ್ರಾಮ ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

0 55


ಹೊಸನಗರ: ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಸೊನಲೆ ಗಾಮ ಪಂಚಾಯ್ತಿ ವ್ಯಾಪ್ತಿಯ ಆದುವಳ್ಳಿ ಗ್ರಾಮದ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ ಎಂದು ಮುಂದಿನ ವಿಧಾನಸಭೆಯ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಮನವಿ ಸಲ್ಲಿಸಿದ್ದಾರೆ.


ನಮ್ಮ ಗ್ರಾಮ ಹಿಂದುಳಿದ ಗ್ರಾಮೀಣ ವ್ಯಾಪ್ತಿಯಾಗಿದ್ದು ವ್ಯವಸಾಯ ಮತ್ತು ಕೂಲಿ ಕಾರ್ಮಿಕರಾಗಿರುತ್ತೇವೆ ನಮ್ಮ ಅಕ್ಕ ಪಕ್ಕದ ಎಲ್ಲಾ ಗ್ರಾಮಗಳು ತೀರ್ಥಹಳ್ಳಿ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟಿದ್ದು ನಮ್ಮ ಆದುವಳ್ಳಿ ಗ್ರಾಮ ಮಾತ್ರ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುತ್ತದೆ ನಮ್ಮ ಗ್ರಾಮದಲ್ಲಿ ಒಟ್ಟಾರೆಯಾಗಿ ಕೇವಲ 96 ಮತದಾರರು ಮಾತ್ರ ಇದ್ದು ನಮ್ಮಲ್ಲಿ ಇಲ್ಲಿಯ ತನಕ ಎಲ್ಲಾ ರಾಜಕಾರಣಿಗಳು ಚುನಾವಣೆಯ ಸಮಯದಲ್ಲಿ ಮಾತ್ರ ನಮ್ಮ ವ್ಯಾಪ್ತಿಗೆ ಆಗಮಿಸಿ ನಮಗೆ ಭರವಸೆ ನೀಡಿ ಹೋಗುತ್ತಾರೆ ವಿನಃ ಇಲ್ಲಿಯ ತನಕ ನಮ್ಮ ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ ನಮ್ಮ ವ್ಯಾಪ್ತಿಯಲ್ಲಿ ಆದುವಳ್ಳಿ ರಸ್ತೆ ಸಂಪರ್ಕ ಮತ್ತು ಊರಿನ ಒಳ ರಸ್ತೆ ನೀರು ಚರಂಡಿ ಮೋರಿ ಮುಂತಾದ ಯಾವುದೇ ಸೌಲಭ್ಯಗಳು ಇಲ್ಲದೇ ನಾವುಗಳು ಈ ಮುಂದುವರಿದ ಯುಗದಲ್ಲಿಯೂ ಸಹ ಯಾವುದೇ ಸೌಲಭ್ಯಗಳಲ್ಲದೇ ಪರದಾಡುವ ಪರಿಸ್ಥಿತಿ ಇರುತ್ತದೆ. ನಮ್ಮ ಈ ಪರಿಸ್ಥಿತಿಯಿಂದ ನಾವುಗಳು ಈ ಹಿಂದೆ ನಮ್ಮ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಸಂಬಂಧಿಸಿದವರಿಗೆ ಅನೇಕ ಬಾರಿ ಮನವಿ ಮಾಡುತ್ತಾ ಬಂದಿದ್ದರೂ ಇಲ್ಲಿಯವರೆಗೆ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ತಕ್ಷಣ ನಮ್ಮ ಗ್ರಾಮದ ಜನತೆಗೆ ಸ್ಪಂದಿಸದಿದ್ದರೇ ನಮ್ಮ ಗ್ರಾಮ ಗ್ರಾಮಸ್ಥರು ಮುಂದಿನ ವಿಧಾನಸಭೆಯನ್ನು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಹೊಸನಗರದ ತಾಲ್ಲೂಕು ಗ್ರೇಡ್2 ತಹಶೀಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿದರು.

ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು ಹಾಗೂ ತಪ್ಪಿದ್ದಲ್ಲಿ ವಿಧಾನಸಭೆ ಚುನಾವಣೆ ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯಿತಿ ಚುನಾವಣೆ ಬಹಿಷ್ಕರಿಸುವುದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!