Ramadan 2023 | ಹೊಸನಗರದಲ್ಲಿ ಮುಸ್ಲಿಂ ಬಾಂಧವರಿಂದ ಸಡಗರ ಸಂಭ್ರಮದಿಂದ ರಂಜಾನ್ ಆಚರಣೆ

ಹೊಸನಗರ: ಪಟ್ಟಣ ಹಾಗೂ ಜಯನಗರ, ಗೊರಗೋಡು, ನಗರ, ಕಚ್ಚಿಗೆಬೈಲ್, ಮಾರುತಿಪುರ, ಬಟ್ಟೆಮಲ್ಲಪ್ಪ, ಗರ್ತಿಕೆರೆ, ರಿಪ್ಪನ್‌ಪೇಟೆ ಮೊದಲಾದಡೆಗಳಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಬಹಳ ಗೌರವ ಶ್ರದ್ಧಾಭಕ್ತಿಯಿಂದ ಬೆಳಗ್ಗೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬಕ್ಕೆ ಮೆರಗು ನೀಡಿದರು.

ಮುಸ್ಲಿಂ ಬಾಂಧವರು ಮನೆಯಲ್ಲಿ ಸಡಗರ ಸಂಭ್ರಮದಿಂದ ಹೊಸ ಬಟ್ಟೆ ಧರಿಸಿ ವಿಶೇಷ ಖಾದ್ಯ ಭೋಜನ ಮಾಡಿ ಬಂಧು-ಬಾಂಧವರು ಸ್ನೇಹಿತರಿಗೆ ಉಣಬಡಿಸುವ ಮೂಲಕ ಹಾಗೂ ದಾನ ಕಾರ್ಯ ಕೈಗೊಳ್ಳುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮಿಸಿದರು.

ಬದುಕಿನ ಪಾಠವನ್ನು ಕಲಿಸುವ ಪವಿತ್ರ ರಂಜಾನ್

ಮುಸ್ಲೀಮರಿಗೆ ಪವಿತ್ರ ರಂಜಾನ್ ಬದುಕಿನ ಅನೇಕ ಪಾಠಗಳನ್ನು ಕಲಿಸುತ್ತದೆ, ದಾನವನ್ನು ಹಸಿವಿಗೆ ಒಳಪಡಿಸಿ ಗೆಲ್ಲುವುದು,ಇದರೊಂದಿಗೆ ಹಸಿವಿಗೆ ಒಳಪಡುವ ಬಡವರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದು,ಉಪವಾಸ ಕೈಗೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು,ಇದರೊಂದಿಗೆ ಅನಾವಶ್ಯಕ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು, ಕೆಟ್ಟವಿಚಾರ ಮತ್ತು ಕೆಟ್ಟ ಕೆಲಸಗಳಿಂದ ದೂರ ಇರುವುದು, ನಮ್ಮ ಸುತ್ತಮುತ್ತಲಿನವರೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವದೊಂದಿಗೆ ಬಾಳುವುದು, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಂತಾದ ಅನೇಕ ಅಂಶಗಳನ್ನು ಕಲಿಸುತ್ತದೆ ಎಂದು ಹೊಸನಗರ ಟೌನ್ ನಲ್ಲಿರುವ ಕಳೂರು ಜುಮ್ಮಾ ಮಸೀದಿಯ ಖತೀಬರಾದ ಮೌಲಾನ ಜನಾಬ್ ಅಬ್ದುಲ್ ಹಾಸಿಬ್ ಅಭಿಪ್ರಾಯಪಟ್ಟರು.

ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಹಳೆ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ ನಿರ್ವಹಿಸಲಾಯಿತು. ಮತ್ತೊಬ್ಬ ಖತೀಬರಾದ ಮುಫ್ತಿ ಮಾಸೂಂ ಅಲಿಯವರು ಖುತ್ಬಾ ನಿರ್ವಹಿಸಿದರು.

ಹಾಫಿಝ್ ಅಬ್ದುಲ್ಲಾ, ಕಮಿಟಿಯ ಅಧ್ಯಕ್ಷರಾದ ಬಾಷಾ ಸಾಬ್, ಕಾರ್ಯದರ್ಶಿಗಳಾದ ಹೆಚ್ ಆರ್ ಅಬ್ದುಲ್ ರಜಾಕ್, ಖಜಾಂಚಿಗಳಾದ ಅಬ್ದುಲ್ ನಿಸಾರ್, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರಾದ ಕೆ.ಇಲಿಯಾಸ್, ಪಟ್ಟಣ.ಪಂಚಾಯತಿ.ಮಾಜಿ ಸದಸ್ಯರಾದ ಎಸ್.ಎಂ.ಸಲೀಂ, ಪ್ರಮುಖರಾದ ಎಂ.ಡಿ.ಉಸ್ಮಾನ್,ಬಾಷಾ ಸಾಬ್, ಮಹಮ್ಮದ್ ಶರೀಫ್, ಸೈಯದ್ ಜಾಫರ್, ಮಹಮ್ಮದ್ ಅಲಿ, ಮಹಮ್ಮದ್ ಗೌಸ್, ಜಿ.ಕೆ.ಅನ್ವರ್,ಸಲೀಂ ರಜಾಕ್, ಕಮಿಟಿಯ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Articles

error: Content is protected !!